Select Your Language

Notifications

webdunia
webdunia
webdunia
webdunia

ಅಪ್ಪ ಮಗನ ಕುತಂತ್ರಕ್ಕೆ ನನ್ನನ್ನು ಉಚ್ಛಾಟಿಸಲಾಗಿದೆ: ಆಕ್ರೋಶ ಹೊರಹಾಕಿದ ಈಶ್ವರಪ್ಪ

ಅಪ್ಪ ಮಗನ ಕುತಂತ್ರಕ್ಕೆ ನನ್ನನ್ನು ಉಚ್ಛಾಟಿಸಲಾಗಿದೆ: ಆಕ್ರೋಶ ಹೊರಹಾಕಿದ ಈಶ್ವರಪ್ಪ

Sampriya

ಶಿವಮೊಗ್ಗ , ಮಂಗಳವಾರ, 23 ಏಪ್ರಿಲ್ 2024 (15:51 IST)
ಶಿವಮೊಗ್ಗ:   ಎಳಸು ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ತಮ್ಮ ಅಪ್ಪ ಯಡಿಯೂರಪ್ಪರ ಮಾತು ಕೇಳಿ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎಂದು ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ ಎಸ್ ಈಶ್ವರಪ್ಪ ಅವರು ಆಕ್ರೋಶ ಹೊರಹಾಕಿದರು.

ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೆ ಎಸ್ ಈಶ್ವರಪ್ಪ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

'ಅಪ್ಪ- ಮಗನ (ಯಡಿಯೂರಪ್ಪ ಹಾಗೂ ಪುತ್ರ, ಬಿ.ವೈ. ವಿಜಯೇಂದ್ರ ) ಕುತಂತ್ರದಿಂದ ನನ್ನನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ‌‌.‌ ನಾನು ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮತ್ತೇ ಬಿಜೆಪಿ ಸೇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನನ್ನನ್ನು ಉಚ್ಛಾಟನೆ ಮಾಡಿದ್ದಕ್ಕೆ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದು, ಎಳಸು ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ತಮ್ಮ ಅಪ್ಪನ (ಯಡಿಯೂರಪ್ಪ) ಮಾತು ಕೇಳಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಪಕ್ಷೇತರ ಅಭ್ಯರ್ಥಿ ಆಗಿ ಎರಡು ಕಬ್ಬು ಹಿಡಿದಿರುವ ರೈತನ ಚಿಹ್ನೆ ನನಗೆ ಸಿಕ್ಕಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಇದೇ 28, 29 ರಂದು ಮತ್ತೆ ಮೋದಿ ರಾಜ್ಯಕ್ಕೆ ದೌಡು: ಉತ್ತರ ಕರ್ನಾಟಕದಲ್ಲಿ ಮತಬೇಟೆಗೆ ಸಿದ್ಧತೆ