Select Your Language

Notifications

webdunia
webdunia
webdunia
webdunia

ಐಟಿ ನೋಟಿಸ್ ಬಂದಿಲ್ಲ, ಖಾತೆ ಬ್ಲಾಕ್ ಆಗಿಲ್ಲ: ಡಿಕೆಶಿ ಸ್ಪಷ್ಟನೆ

ಐಟಿ ದಾಳಿ
ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿಲ್ಲ. ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿಲ್ಲ ಎಂದು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ಎರಡನೇ ಬಾರಿಗೆ ನೋಟಿಸ್ ರವಾನಿಸಿದೆ ಎನ್ನುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿಲ್ಲ. ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
 
ನಾವು ಹಲವಾರು ವ್ಯವಹಾರಗಳನ್ನು ಮಾಡುತ್ತಿರುವುದರಿಂದ ನೂರಾರು ಖಾತೆಗಳನ್ನು ಹೊಂದಿರುತ್ತೇವೆ. ಪ್ರತಿಯೊಂದು ವ್ಯವಹಾರಕ್ಕೂ ಪ್ರತ್ಯೇಕ ಖಾತೆಯಿರುತ್ತದೆ ಎಂದು ತಿಳಿಸಿದ್ದಾರೆ.
 
ಕೆಲ ಬ್ಯಾಂಕ್ ಖಾತೆಗಳು ಬ್ಲಾಕ್ ಆಗಿರಬಹುದು ಆದರೆ, ನನಗೆ ಗೊತ್ತಿಲ್ಲ, ನನ್ನ ಹೆಸರಿನಲ್ಲಿರುವ ಖಾತೆ ಬ್ಲಾಕ್ ಆಗಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತ್ಯೇಕ ಧರ್ಮ: ಒಗ್ಗಟ್ಟಾಗಿ ಬಂದಲ್ಲಿ ಶಿಫಾರಸು ಸಿಎಂ ಸ್ಪಷ್ಟನೆ