Select Your Language

Notifications

webdunia
webdunia
webdunia
webdunia

ಡಿಸಿಎಂ ಬೇಕೆಂದು ಕೇಳಿದ್ರೆ ತಪ್ಪೇನಿದೆ

ಡಿಸಿಎಂ ಬೇಕೆಂದು ಕೇಳಿದ್ರೆ ತಪ್ಪೇನಿದೆ
ಬಾಗಲಕೋಟೆ , ಶುಕ್ರವಾರ, 22 ಸೆಪ್ಟಂಬರ್ 2023 (14:46 IST)
ಡಿಸಿಎಂ ಹುದ್ದೆಗಳನ್ನ ಹೈಕಮಾಂಡ್ ಮಾಡಬೇಕು. ನಮ್ಮ ಹಂತದಲ್ಲಿ ಯಾವುದೂ ಇಲ್ಲ ಎಂದು ಬೆಂಗಳೂರಲ್ಲಿ ಸಚಿವ M.B.ಪಾಟೀಲ್​​​​ ತಿಳಿಸಿದ್ರು.. ಡಿಸಿಎಂ ವಿಚಾರ ಕುರಿತು ಪಕ್ಷದ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡ್ತೀವಿ.. ಜವಾಬ್ದಾರಿಯುತ ಸಚಿವರು ಪತ್ರ ಬರೆಯುತ್ತಾರೆ.. ಎಲ್ಲಾ ಸಮುದಾಯಗಳೂ ನಮ್ಮ ಜೊತೆಯಲ್ಲಿ ನಿಂತಿವೆ ಎಂದು ತಿಳಿಸಿದ್ರು.. ರಾಜ್ಯದ ಜನತೆ 135 ಸ್ಥಾನ ನೀಡಿ ದೊಡ್ಡ ಬಹುಮತ ಕೊಟ್ಟಿದ್ದಾರೆ.. ಈ ಬಾರಿ ಲೋಕಸಭೆಯಲ್ಲಿ ಮಿನಿಮಮ್​​ 20 ಸ್ಥಾನ ಗೆಲ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು. ಹೈಕಮಾಂಡ್​​​​ ಏನೇ ಹೇಳಿದ್ರೂ ಒಪ್ಪಲೇಬೇಕು.. ದಲಿತ ಸಿಎಂ, ಡಿಸಿಎಂ ಬಗ್ಗೆ ಮಾತಾಡಿದ್ರೆ ತಪ್ಪೇನಿದೆ.. ಅವ್ರ ಅಭಿಪ್ರಾಯದ ಬಗ್ಗೆ ಪತ್ರ ಬರೆಯುತ್ತಾರೆ. ಅನೇಕ ಸಮುದಾಯಗಳಿಗೆ ಸ್ಥಾನಮಾನ ಸಿಕ್ಕಿಲ್ಲ.. ಲಂಬಾಣಿ ಸಮುದಾಯಕ್ಕೆ ಸಚಿವ ಸ್ಥಾನ ಕೊಡೋಕೆ ಆಗ್ಲಿಲ್ಲ. ಶಾಸಕ ಬಸವರಾಜ್​​ ರಾಯರೆಡ್ಡಿ, ಶಾಸಕ R.V.ದೇಶಪಾಂಡೆ ಹೀಗೆ ಮುಂತಾದ ಬಹಳಷ್ಟು ಜನ ಸಮರ್ಥರಿದ್ದಾರೆ ಎಂದು ತಿಳಿಸಿದ್ರು.

ಮೂರು ಡಿಸಿಎಂ ಸ್ಥಾನದ ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡುವುದು ತಪ್ಪು ಎಂದು ಬೀಳಗಿ ಕಾಂಗ್ರೆಸ್​​ ಶಾಸಕ J.T.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಡಿಸಿಎಂ ಸ್ಥಾನದ ಅವಶ್ಯಕತೆ ಇದೆಯೋ ಇಲ್ವೋ ಅನ್ನೋದಕ್ಕಿಂತ ಪಬ್ಲಿಕ್ ಆಗಿ ಹೇಳಿಕೆ ನೀಡಬಾರದು.. ರಾಜ್ಯಮಟ್ಟದ ನಾಯಕರಿದ್ದಾರೆ.. ರಾಷ್ಟ್ರ ಮಟ್ಟದ ನಾಯಕರಿದ್ದಾರೆ.. ಅವರ ಬಳಿ ಈ ವಿಚಾರಗಳನ್ನ ಅಭಿವ್ಯಕ್ತಗೊಳಿಸಿದ್ರೆ ತಪ್ಪಿಲ್ಲ ಎಂದು ತಿಳಿಸಿದ್ರು. ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರೇ ಪಬ್ಲಿಕ್ ಆಗಿ ಹೇಳಿಕೆ ಕೊಡಬೇಡಿ ಎಂದು ಸಲಹೆ ನೀಡಿದ್ದಾರೆ.. ನಮ್ಮ ಅಧಿನಾಯಕಿಯ ಸೂಚನೆಯನ್ನು ಪಕ್ಷದವರೆಲ್ಲರೂ ಪಾಲನೆ ಮಾಡಬೇಕು ಎಂದು ತಿಳಿಸಿದ್ರು. ನಮ್ಮ ಮನಬಂದಂತೆ ಪ್ರತಿಕ್ರಿಯೆ ನೀಡುವುದರಿಂದ ಪಕ್ಷದಲ್ಲಿ ಶಿಸ್ತು ಉಳಿಯೋದಿಲ್ಲ. ಇದು ಆಗಬಾರದು ಎಂಬುದು ನಮ್ಮ ಅಭಿಮತ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಕಾವೇರಿದ ಕಾವೇರಿ ಹೋರಾಟ