Webdunia - Bharat's app for daily news and videos

Install App

ಶೆಡ್ ಬಳಿ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗುವಿನ ಮೇಲೆ ನಡೆದಿದೆ ಇಂತಹ ನೀಚ ಕೃತ್ಯ

Webdunia
ಗುರುವಾರ, 25 ಅಕ್ಟೋಬರ್ 2018 (09:55 IST)
ಬೆಂಗಳೂರು : ಕಾಮುಕನೊಬ್ಬ  ನಾಲ್ಕು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ನೀಚ ಕೃತ್ಯ ನಗರದ ಸುಬ್ರಮಣ್ಯಪುರದಲ್ಲಿ ನಡೆದಿದೆ.


ಕೂಲಿ ಕೆಲಸಕ್ಕಾಗಿ ಯಾದಗಿರಿಯಿಂದ ಬಂದ ದಂಪತಿಗಳು ಸುಬ್ರಮಣ್ಯಪುರದ ಅರೇಹಳ್ಳಿಯ ನಿರ್ಮಾಣ ಹಂತದ ಕಟ್ಟಡದ ಶೆಡ್ ನಲ್ಲಿ ವಾಸವಿದ್ದರು. ಮಂಗಳವಾರ ಬೆಳಗ್ಗೆ ಮಗುವನ್ನು ಶೆಡ್ ನಲ್ಲಿಯೇ ಬಿಟ್ಟು ಪಕ್ಕದಲ್ಲಿ  ಇದ್ದ ಕಟ್ಟಡದಲ್ಲಿ ಕೂಲಿ ಕೆಲಸಕ್ಕೆ ತೆರಳಿದ್ದರು.


ಆದರೆ ಶೆಡ್ ಬಳಿ ಆಟವಾಡುತ್ತಿದ್ದ ಮಗುವಿನ ಜೊತೆ ಯಾರು ಇಲ್ಲದಿರುವುದನ್ನು ಕಂಡು ಕಾಮುಕನೊಬ್ಬ ಮಗುವಿನ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದಾನೆ. ಘಟನೆಯಿಂದ ಅಸ್ವಸ್ಥಗೊಂಡಿರುವ ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಪೋಷಕರಿಗೆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದುಬಂದಿದೆ.


ತಕ್ಷಣ ಪೋಷಕರು ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.  ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೃತ್ಯ ಎಸಗಿರುವ ದುಷ್ಕರ್ಮಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ