Publish Date: Sat, 19 Aug 2023 (18:30 IST)
Updated Date: Sat, 19 Aug 2023 (16:21 IST)
ತಮ್ಮ ಪಕ್ಷದ ಹಿರಿಯ ಶಾಸಕರನ್ನು ಸಮಾಧಾನದಲ್ಲಿ ಇರಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗಿಲ್ಲ.ಅಲ್ಲೇ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗುತ್ತಿದೆ.ಯಾರೂ ಹೋಗುವುದಿಲ್ಲ ಎಂಬುದು ದೃಢ.ಇಷ್ಟರ ನಂತರವೂ ಏನಾದರೂ ಮಾಡಿದರೆ ನಮಗೂ ಗೊತ್ತಿದೆ.ನಮ್ಮ ಪಕ್ಷ ಉಳಿಸಿಕೊಳ್ಳುವುದು, ಕಟ್ಟುವುದು ನಮಗೆ ಗೊತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಪಗಡೆ, ಚೆಸ್ ಏಕಮುಖ ಅಲ್ಲ.ಅವರು ದಾಳ ಉರುಳಿಸಿದರೆ ನಾವೂ ಆಡುತ್ತೇವೆ.ನಾವು ಚೆಕ್ ಮೇಟ್ ಮಾಡಿದರೆ ಸಣ್ಣಪುಟ್ಟ ಸೈನಿಕರಿಗೆ ಮಾಡುವುದಿಲ್ಲ.ನಾವು ರಾಜನಿಗೇ ಚೆಕ್‌ಮೇಟ್ ಮಾಡುತ್ತೇವೆ.ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಕುರಿತು ಮೊದಲಿಗೆ ಸಿದ್ದರಾಮಯ್ಯ ತಮ್ಮ ಸರ್ಕಾರದ ಯೋಜನೆಗಳ ಕುರಿತು ವರದಿ ಬಗ್ಗೆ ಮಾತಾಡಲಿ.ಅರ್ಕಾವತಿ ಹಗರಣದಲ್ಲಿ ಏಕೆ ಕ್ರಮ ಕಾಯಗೊಳ್ಳಲಿಲ್ಲ?ಮೊದಲು ಅವರ ಕುರಿತು ವಿಚಾರದಲ್ಲಿ ಕ್ರಮ ಕೈಗೊಳ್ಳಲಿ.ಬಿಜೆಪಿ ಸರ್ಕಾರದಲ್ಲಿ ಅರ್ಕಾವತಿ ಹಗರಣ ಕೈಗೆತ್ತಿಕೊಳ್ಳದ ಬಗ್ಗೆ ಅದಕ್ಕಾಗೇ ನಾವು ಇವತ್ತು ವಿಪಕ್ಷದಲ್ಲಿ ಕೂತಿದ್ದೇವೆ.ಈ ಬಗ್ಗೆ ಬಿಜೆಪಿ ಕ್ರಮ ಕೈಗೊಳ್ಳಲಿಲ್ಲ.ಅನೇಕ ಬಾರಿ ಪಕ್ಷದ ಆಂತರಿಕ ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ.ಆದರೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎನ್ನುವುದು ತಿಳಿದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.