Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿದರೆ ಉತ್ತಮ

ಚಳಿಗಾಲದಲ್ಲಿ ಈ ಆಹಾರವನ್ನು ಸೇವಿಸಿದರೆ ಉತ್ತಮ
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (09:42 IST)
ಬೆಂಗಳೂರು : ಚಳಿಗಾಲದಲ್ಲಿ ವಾತಾವರಣ ತಂಪಾಗಿರುವುದರಿಂದ ಹೆಚ್ಚಿನವರು ಶೀತ-ಕೆಮ್ಮು, ಕಫ, ಜ್ವರ, ಚರ್ಮ ಒಣಗುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅದಕ್ಕಾಗಿ ಈ ಸಮಯದಲ್ಲಿ ದೇಹವನ್ನು ಬೆಚ್ಚಗಿಡುವ ಕೆಲವೊಂದು ಆಹಾರವನ್ನು ತಿನ್ನಬೇಕಾಗುತ್ತದೆ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ರಾಗಿ : ಚಳಿಗಾಲದಲ್ಲಿ ರಾಗಿ ಸೇವನೆ ಮಾಡಬೇಕು. ಇದರಲ್ಲಿ ಮೆಗ್ನೀಸಿಯಂ, ಕ್ಯಾಲ್ಸಿಯಂ, ಫೈಬರ್, ವಿಟಮಿನ್ ಬಿ, ಆಂಟಿಆಕ್ಸಿಡೆಂಟ್ ಹಾಗೂ ಪ್ರೊಟೀನ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ದಿನಪೂರ್ತಿ ದೇಹಕ್ಕೆ ಶಕ್ತಿ ನೀಡುತ್ತದೆ.

 

ಬಾದಾಮಿ : ಚಳಿಗಾಲದಲ್ಲಿ ವಿಟಮಿನ್ ಯುಕ್ತ ಬಾದಾಮಿಯನ್ನು ಸೇವನೆ ಮಾಡಬೇಕು. ಬೆಳಿಗ್ಗೆ ಜೇನುತುಪ್ಪದ ಜೊತೆ ಬಾದಾಮಿ ತಿನ್ನುವುದರಿಂದ ಅನೇಕ ರೋಗ ದೂರವಾಗುತ್ತದೆ. ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗುತ್ತದೆ.

 

ಶುಂಠಿ : ಚಳಿಗಾಲದಲ್ಲಿ ಪ್ರತಿ ದಿನ ಶುಂಠಿ ರಸ ಅಥವಾ ಶುಂಠಿ ಟೀ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ.

 

ದಾಲ್ಚಿನಿ : ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಹೆಚ್ಚಿಸಿ ದೇಹವನ್ನು ಚಳಿಯಿಂದ ರಕ್ಷಿಸುವ ಕೆಲಸವನ್ನು ದಾಲ್ಚಿನಿ ಮಾಡುತ್ತದೆ. ದಾಲ್ಚಿನಿಯನ್ನು ಆಹಾರ, ಟೀ, ಕಾಫಿ ಅಥವಾ ಬಿಸಿ ನೀರಿನೊಂದಿಗೆ ಸೇವನೆ ಮಾಡಬೇಕು

 

ಕಡಲೆಕಾಯಿ : ಖನಿಜ, ಕ್ಯಾಲ್ಸಿಯಂ ಸೇರಿದಂತೆ ಕ್ಯಾರೋಟಿನ್ ಕಡಲೆಕಾಯಿಯಲ್ಲಿರುವುದರಿಂದ ಚಳಿಗಾಲದಲ್ಲಿ ಇದನ್ನು ತಿನ್ನಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪಾದ್ರಿಗಳು