Webdunia - Bharat's app for daily news and videos

Install App

ಬಿಗ್‍ಬಾಸ್ ಮನೆಯಲ್ಲಿ ಆಗಿದೆಯಾ ಮೋಸದಾಟ…..?

Webdunia
ಶುಕ್ರವಾರ, 9 ಜುಲೈ 2021 (17:31 IST)
Bigg Boss 8 Kannada : ಬಿಗ್ ಬಾಸ್ ಸೀಸನ್ 8ರ ಸೆಕೆಂಡ್ ್ಇನ್ನಿಂಗ್ಸ್ನಲ್ಲಿ ಪ್ರಶಾಂತ್ ಸಂಬರಗಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರ ನಡುವೆ ಒಂದು ಒಳ್ಳೆಯ ಬಾಂಧವ್ಯ ಇದೆ.



ಎರಡನೇ ಇನ್ನಿಂಗ್ಸ್ ಆರಂಭವಾದಾಗಿನಿಂದ ಇವರ ನಡುವೆ ಜಗಳ ಆಗಿದ್ದೇ ಇಲ್ಲ. ಕೆಲವೊಮ್ಮೆ ಟಾಸ್ಕ್ ವಿಷಯದಲ್ಲಿ ಇವರ ನಡುವೆ ಅಸಮಧಾನ ಮೂಡಿದರೂ ಅಲ್ಲೇ ಅದನ್ನು ಮಾತನಾಡಿ ಸರಿಪಡಿಸಿಕೊಳ್ಳುತ್ತಾರೆ. ಆದರೆ 2ನೇ ಇನ್ನಿಂಗ್ಸ್ನಲ್ಲಿ ಇದೇ ಮೊದಲ ಸಲ ಪ್ರಶಾಂತ್ ಸಂಬರಗಿ ಹಾಗೂ ಶಮಂತ್ ಗೌಡ ಅವರು ದಿವ್ಯಾ ಉರುಡುಗ ಅವರ ಮೇಲೆ ಪಕ್ಷಪಾತ ಮಾಡುತ್ತಿರುವ ಆರೋಪ ಮಾಡಿದ್ದಾರೆ. ಹೌದು, ದಿವ್ಯಾ ಉರುಡುಗ ಈಗ ಮನೆಯ ಕ್ಯಾಪ್ಟನ್ ಆಗಿದ್ದು, ಮನೆಯಲ್ಲಿ ನಡೆಯುತ್ತಿರುವ ಟಾಸ್ಕ್ಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಈ ಸಲ ದಿವ್ಯಾ ಉರುಡುಗ ಅವರು ತಮ್ಮ ಕರ್ತವ್ಯ ನಿರ್ವಹಿಸುವಾಗ ಪಕ್ಷಪಾತ ಮಾಡುತ್ತಿದ್ದು ಮೋಸ ಮಾಡುತ್ತಿದ್ದಾರೆ ಅನ್ನೋ ಆರೋಪ ಕೆಲವರಿಂದ ಕೇಳಿ ಬರುತ್ತಿದೆ.




 
ಬಿಗ್ ಬಾಸ್ ಮನೆಯಲ್ಲಿ ಸದ್ಯ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಭಾಗಿಯಾಗಲು ಅರ್ಹತೆ ಪಡೆಯಲು ನಾನಾ ರೀತಿಯ ಟಾಸ್ಕ್ಗಳು ನಡೆಯುತ್ತಿವೆ. ಇದರಲ್ಲಿ ಕ್ಯಾಪ್ಟನ್ ದಿವ್ಯಾ ಉರುಡುಗ ಅವರನ್ನು ಬಿಟ್ಟು ಉಳಿದ ಹತ್ತು ಮಂದಿ ಸ್ಪರ್ಧಿಗಳು ಭಾಗಿಯಾಗುತ್ತಿದ್ದಾರೆ. ಈ ಅರ್ಹತಾ ಸುತ್ತಿಗಾಗಿ ಸೆಣಸಾಡುತ್ತಿರುವ ಸ್ಪರ್ಧಿಗಳಲ್ಲಿ ಚಕ್ರವರ್ತಿ ಚಂದ್ರಚೂಡ, ಶಮಂತ್ ಗೌಡ ಹಾಗೂ ಪ್ರಶಾಂತ್ ಸಂಬರಗಿ ಅವರಿಗೆ ದಿವ್ಯಾ ಉರುಡುಗ ಟಾಸ್ಕ್ನಲ್ಲಿ ಅರವಿಂದ್ ಅವರ ವಿಷಯ ಬಂದಾಗ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ.
ನಿನ್ನೆಯ ಸಂಚಿಕೆಯಲ್ಲಿ ಟಂಕಸಾಲೆ ಟಾಸ್ಕ್ನಲ್ಲಿ ಶಮಂತ್ ಬಜರ್ ಆದ ಕೂಡಲೇ ಶಮಂತ್ ಅವರು ಬಂದು ಏಪ್ರಾನ್ ತೆಗೆದುಕೊಂಡು ನೋಟು ಮುದ್ರಿಸಲು ನಿಲ್ಲುತ್ತಾರೆ. ಶಮಂತ್ ಹಿಂದೆ ಅರವಿಂದ್ ಇದ್ದ ಕಾರಣದಿಂದ ದಿವ್ಯಾ ಉರುಡುಗ ಶಮಂತ್ ಮಾಡಿದ್ದಯು ಫೌಲ್ ಎಂದು ಹೇಳಿ ಅರವಿಂದ್ ಅವರಿಗೆ ಆಡಲು ಅವಕಾಶ ನೀಡುತ್ತಾರೆ. ಇದರಿಂದಾಗಿ ಸಿಟ್ಟಿಗೆದ್ದ ಶಮಂತ್, ಒಂದು ವೇಳೆ ಅರವಿಂದ್ ಅಲ್ಲಿ ಇಲ್ಲದಿದ್ದರೆ ದಿವ್ಯಾ ಉರುಡುಗ ಹೀಗೆ ಮಾಡುತ್ತಿರಲಿಲ್ಲ ಎಂದಿದ್ದಾರೆ.
ಇನ್ನು ದಿವ್ಯಾ ಉರುಡುಗ ಮಾತ್ರ ಬಜರ್ ಆದಾಗ ಸ್ಪರ್ಧಿಗಳು ಮನೆಯ ಒಳಗಿನಿಂದ ಬಂದರೆ ಮಾತ್ರ ನೋಡು ಮುದ್ರಣ ಮಾಡಲು ಅರ್ಹತೆ ಪಡೆಯುತ್ತಾರೆ ಅನ್ನೋ ನಿಯಮವನ್ನೇ ನಾವೇ ಮಾಡಿಕೊಂಡಿದ್ದೇವೆ. ಅದನ್ನು ಶಮಂತ್ ಉಲ್ಲಂಘನೆ ಮಾಡಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments