ಬೆಂಗಳೂರು : ಆ್ಯಪ್ ಆಧಾರಿತ ಆಟೋ ಸೇವೆ ರದ್ದು ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಓಲಾ, ಉಬರ್ ಕಂಪನಿಗಳು ಹೈಕೋರ್ಟ್ ಮೊರೆ ಹೋಗಿವೆ.
ಸಾರಿಗೆ ಇಲಾಖೆ ಕ್ರಮ ಸರಿ ಇಲ್ಲ, ನಾವು ಯಾವುದೇ ರೀತಿಯಲ್ಲಿ ಹಣವನ್ನು ಹೆಚ್ಚಿಗೆ ಪಡೆಯುತ್ತಿಲ್ಲ. ನಮ್ಮ ಕಂಪನಿಯಿಂದ ಐಷಾರಾಮಿ ಕ್ಯಾಬ್ ಓಡಿಸಲಾಗುತ್ತಿದೆ. ಇದಕ್ಕೆ ನಾವು ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ ಅಷ್ಟೇ. ಆದ್ರೇ ಅದನ್ನು ತಪ್ಪು ಅಂತ ಸಾರಿಗೆ ಇಲಾಖೆ ವಾದಿಸ್ತಾ ಇದೆ.
ನಾವು ಕೂಡ ಫುಡ್ ಡೆಲಿವರಿ ಆ್ಯಪ್ಗಳಂತೆ ಸಂದರ್ಭಕ್ಕೆ ಅನುಸಾರವಾಗಿ, ಒತ್ತಡ, ಬೇಡಿಕೆ ಹೆಚ್ಚಿದ್ದಾಗ ಕೆಲವು ಬದಲಾವಣೆ ಮಾಡ್ತೀವಿ ಎಂದು ಕೋರ್ಟ್ನಲ್ಲಿ ವಾದ ಮಂಡಿಸಿವೆ. ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಬೇಕೆಂದು ನ್ಯಾಯಾಲಯವನ್ನು ಕೋರಿವೆ.