Publish Date: Thu, 27 Jun 2019 (17:35 IST)
Updated Date: Thu, 27 Jun 2019 (17:45 IST)
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ ಹೀಗಂತ ಕೈ ಪಾಳೆಯದ ಹಿರಿಯ ರಾಜಕಾರಣಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಮಧ್ಯಂತರ ಚುನಾವಣೆ ಸಂಬಂಧ ವೈಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಹೊರತು ಪಕ್ಷದ ಅಭಿಪ್ರಾಯವಲ್ಲ. ಸಮ್ಮಿಶ್ರ ಸರಕಾರದಲ್ಲಿ ಸಾಕಷ್ಟು ಯೋಜನೆ ಹಾಕಿಕೊಂಡು ಅದರ ಅನುಷ್ಠಾನದತ್ತ ಸಾಗುತ್ತಿದ್ದೇವೆ. ಜನರಿಗೆ ನೀಡಿದ ಭರವಸೆಯಂತೆ ಕೆಲಸ ಮಾಡುತ್ತಿದ್ದೇವೆ. ಹೀಗಂತ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಗ್ರಾಮವಾಸ್ತವ್ಯ ಬಗ್ಗೆ ಬಿಜೆಪಿ ಅವರ ಟೀಕೆ ಸರಿಯಲ್ಲ. ಸರಕಾರವನ್ನು ಟೀಕೆ ಮಾಡುವವರು ನೇರವಾಗಿ ವಿಧಾನಸೌಧ ಅಥವಾ ಬಿಜೆಪಿ ಕಚೇರಿಯಲ್ಲಿ ಮಾಡಬಹುದಿತ್ತು. ಆದರೂ ಪಾದಯಾತ್ರೆ ಮಾಡುವ ಮೂಲಕ ಟೀಕೆ ಮಾಡುವುದು ಏನಿತ್ತು. ಸರಕಾರವೇ ಜನರ ಬಳಿ ಹೋಗುವುದನ್ನು ಟೀಕೆ ಮಾಡಿದರೆ ಹೇಗೆ? ಗಾಂಧೀಜಿ ಕೂಡ ಗ್ರಾಮವಾಸ್ತವ್ಯ ಮಾಡಿದ್ದರು. ಅವರನ್ನು ಇವರು ಪ್ರಶ್ನೆ ಮಾಡುತ್ತಾರಾ? ಎಂದು ಕೇಳಿದ್ರು.
ನಾನು ಚುನಾವಣೆ ಮುಂಚೆಯೂ ಜನಸ್ಪಂದನ ಕಾರ್ಯಕ್ರಮ ಮಾಡುತ್ತಿದ್ದೆ. ಈಗಲೂ ನನ್ನ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಈ ಶನಿವಾರ ಬೆಂಗಳೂರಿನಲ್ಲೂ ಜನಸಂಪರ್ಕ ಸಭೆ ಮಾಡಲಿದ್ದೇನೆ. ಅಗತ್ಯ ಬಿದ್ದರೆ ರಾಜ್ಯಾದ್ಯಂತ ಮಾಡಲಾಗುವುದು ಎಂದ್ರು.