Publish Date: Sun, 26 Mar 2023 (07:10 IST)
Updated Date: Sun, 26 Mar 2023 (07:02 IST)
ಚಿಕ್ಕಬಳ್ಳಾಪುರ : ಮುಸ್ಲಿಮರಿಗೆ ತೊಂದರೆ ಕೊಡುವ ಉದ್ದೇಶದಿಂದ ಮೀಸಲಾತಿಯಲ್ಲಿ ಬಹುದೊಡ್ಡ ಅನ್ಯಾಯ, ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.
ಗೌರಿಬಿದನೂರು ನಗರದ ಹೊರವಲಯದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ರದ್ದುಮಾಡಿರುವ ಕುರಿತು ಮಾತನಾಡಿದ ಅವರು, ಇದು ಅಲ್ಪಸಂಖ್ಯಾತರಿಗೆ ಮಾಡಿರುವ ಬಹುದೊಡ್ಡ ಅನ್ಯಾಯ, ದ್ರೋಹ.
ಮುಸ್ಲಿಂ ಮೀಸಲಾತಿ ತೆಗೆದು ಹಾಕಿ ಅಂತಾ ಯಾರಾದ್ರೂ ಅರ್ಜಿ ಕೊಟ್ಟಿದ್ದಾರಾ? ನ್ಯಾಯಾಲಯ ಆದೇಶ ಮಾಡಿದೆಯಾ? ಯಾರಾದ್ರೂ ಮನವಿ ಮಾಡಿದ್ದಾರಾ? ಮುಸ್ಲಿಮರಿಗೆ ತೊಂದರೆ ಕೊಡುವ ಉದ್ದೇಶದಿಂದ ಮಾಡಿರುವ ದ್ರೋಹ ಇದು. ಅಲ್ಪಸಂಖ್ಯಾತರನ್ನ ರಕ್ಷಣೆ ಮಾಡೋದು ನಾವೇ. ಅವರು ನಮಗೆ ವೋಟು ಹಾಕ್ತಾರೆ ಅದು ಬೇರೆ ಪ್ರಶ್ನೆ, ಆದರೆ ಶೇ.4 ಮೀಸಲಾತಿ ತೆಗೆದಿದ್ದು ಯಾಕೆ? ಇವರದ್ದು ತೆಗೆದು ಅವರಿಗೆ ಕೊಡಿ ಅಂತಾ ಕೇಳಿದ್ರಾ? ಎಂದು ಪ್ರಶ್ನಿಸಿದರು.