Publish Date: Sat, 02 Feb 2019 (18:52 IST)
Updated Date: Sat, 02 Feb 2019 (18:53 IST)
ರಾಜಸ್ಥಾನಿ ವರ್ತಕರ ವಿರುದ್ಧ ಸ್ಥಳೀಯ ವರ್ತಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಪ್ರತಿಭಟನೆ ನಡೆದಿದೆ. ಚಿಂಚಲಿ ಪಟ್ಟಣದ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಗಿದೆ.
ರಾಜಸ್ಥಾನಿ ವರ್ತಕರು ಚಿಂಚಲಿ ಪಟ್ಟಣದಲ್ಲಿ ಅಂಗಡಿ ತೆರೆಯಲು ವಿರೋಧ ವ್ಯಕ್ತಪಡಿಸಿ ಈ ಪ್ರತಿಭಟನೆ ನಡೆಸಲಾಗಿದೆ.
ಸ್ಥಳೀಯ ವ್ಯಾಪಾರಿಗಳು, ಕಿರಾಣಿ ಅಂಗಡಿ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ. ಯಾವುದೇ ಕಾರಣಕ್ಕೂ ರಾಜಸ್ಥಾನಿ ವ್ಯಾಪಾರಸ್ಥರನ್ನು ಒಳಗೆ ಬಿಡದಿರಲು ಪಟ್ಟು ಹಿಡಿದರು.
ಆಗ ಪ್ರತಿಭಟನೆಗೆ ಕೆಲವು ಸ್ಥಳೀಯರಿಂದಲೇ ಆಕ್ರೋಶ ವ್ಯಕ್ತವಾಯಿತು. ರಾಜಸ್ಥಾನಿ ವ್ಯಾಪಾರಸ್ಥರು ಇಲ್ಲಿಗೆ ಬಂದರೆ ಎನು ತೊಂದರೆ? ಎಂದು ಕೆಲವು ಸ್ಥಳೀಯರು ಪ್ರಶ್ನೆ ಮಾಡಿದರು.
ರಾಜಸ್ಥಾನಿ ವ್ಯಾಪಾರಸ್ಥರ ಕುರಿತು ಸ್ಥಳೀಯರಲ್ಲಿ ಒಮ್ಮತ ಮೂಡುವಲ್ಲಿ ವಿಫಲವಾಗಿದೆ.