Select Your Language

Notifications

webdunia
webdunia
webdunia
webdunia

ಪೀಣ್ಯ ಪ್ಲೈವೋರ್ ಮೇಲೆ ಕೇಬಲ್ ಅಳವಡಿಕೆ ಶುರು

ಪೀಣ್ಯ ಪ್ಲೈವೋರ್ ಮೇಲೆ ಕೇಬಲ್ ಅಳವಡಿಕೆ ಶುರು
bangalore , ಭಾನುವಾರ, 4 ಜೂನ್ 2023 (19:49 IST)
ರಾಜ್ಯದ 18 ಜಿಲ್ಲೆ ಸಂಪರ್ಕಿಸುವ ಪೀಣ್ಯ ಮೇಲ್ಸೇತುವೆ ಒಂದೂವರೆ ವರ್ಷದಿಂದ ಭಾರಿ ವಾಹನಗಳ ಸಂಚಾರಕ್ಕೆ ಬಂದ್ ಆಕಿತ್ತು , ಈಗಾಗ್ಲೇ ಈ ಬಗ್ಗೆ IISC  ವರದಿ ಮಾಡಿತ್ತು,ಆದ್ರೆ ಇದೀಗ ಎರಡು ಹಂತದಲ್ಲಿ ಕೇಬಲ್ ಅಳವಡಿಕೆ ಮಾಡಲು  NHAI  ಮುಂದಾಗಿದೆ.
 
  ತುಮಕೂರು ರಸ್ತೆಯ ಪೀಣ್ಯ ಮೇಲಸೇತುವೆ 120 ಪಿಲ್ಲರಗಳ ನಡುವೆ   ಹೊಸದಾಗಿ 240 ಕೇಬಲ್ ಅಳವಡಿಕೆ ಕಾರ್ಯ ಸೋಮವಾರದಿಂದ ಆರಂಭವಾಗಿಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಬಿಡ್ ಕರೆದಿದ್ದ ಟೆಂಡರ್ ನಲ್ಲಿ ಪಾಲ್ಗೊಂಡು ಬೀಡ್ ಪಡೆದಿದ್ದ ಪ್ರೆಸಿನೇಟ್ ಕಂಪನಿಯ ಮಧ್ಯಪ್ರದೇಶದ ಭೂಪಾಲ್ ನಿಂದ ಮೊದಲ ಹಂತದ ೨೫ ಟನ್ ಕೇಬಲ್ ತರಸಿದ್ದು,ಸೋಮವಾರದಿಂದ ಅಧಿಕೃತವಾಗಿ ಆಳವಡಿಕೆ ಕಾರ್ಯ ಆರಂಭ ಆಗಲಿದೆ. ಹಾಗೂ ಇಗಾಗ್ಲೇ ಭೂಪಾಲ್ ನಿಂದ ಕೇಬಲ್ ಗಳು ರಾಜಧಾನಿ ತಲುಪಿವೆ . ಈ ಕೇಬಲ್ ಅಳವಡಿಕೆ ಐಐಎಸ್ ಸಿ ಕೆಮಿಕಲ್ ಅನಾಲಿಸಿಸ್ ಮೆಕ್ಯಾನಿಕಲ್ ಸ್ಟ್ರೆಂಥ ಪರಿಕ್ಷೆಗೆ ಒಳಪಡಿಸಿ ತದನಂತರ ಕೇಬಲ್ ಅಳವಡಿಕೆ ಕಾಮಗಾರಿಯನ್ನು ಆರಂಭ ಮಾಡಲಾಗುತ್ತದೆ.
 
ಇನ್ನು ಕೇಬಲ್ ಅಳವಡಿಕೆ ಮುನ್ನ ಮೇಲಸೇತುವೆ ಮೇಲೆ ಲೋಡ್ ಟೆಸ್ಟ್ ನಡೆಯಲಿದೆ. ತದನಂತರ 120 ಪಿಲ್ಲರಗಳಿಗೆ  240 ಕೇಬಲ್ ಅಳವಡಿಕೆ ಐಐಎಸ್ಸಿ ಮಾಡಲಿದೆ. ಈ ಕೇಬಲ್ ಅಳವಡಿಕೆ ಟೆಂಡರ್ ಅನ್ನು ಪ್ರೆಸಿನೇಟ್ ಎಂಬ ಖಾಸಗಿ ಕಂಪನಿಯ ಪಡೆದಿದ್ದು ಸೋಮವಾರದಿಂದ ಐಐಎಸ್ಸಿಯ ಎಲ್ಲಾ ಪರೀಕ್ಷೆ ಮುಗಿದ ನಂತರ ಕೇಬಲ್ ಅಳವಡಿಕೆ ಮಾಡಲಿದೆ. ಹಾಗೂ ಇಗಾಗ್ಲೇ ಬೆಂಗಳೂರಿನ ನಾಗಸಂದ್ರದಲ್ಲಿ ಮಧ್ಯಪ್ರದೇಶದ ಭೂಪಾಲ್ ನಿಂದ ಬಂದಿರುವ ಕೇಬಲ್ ಇಡಲಾಗಿದೆ ಹಾಗೂ ಕಳೆದ ಎರಡು ದಿನಗಳ ಹಿಂದೆಯಷ್ಟೇ ಈ ಕೇಬಲ್ ನಗರಕ್ಕೆ ಬಂದಿದೆ . ಹಾಗೂ ಈ ಕೇಬಲ್ ಅಳವಡಿಕೆ ಮೂರು ತಿಂಗಳ ಒಳಗೆ ಸಂಪೂರ್ಣ ಮಾಡಲಾಗುತ್ತದೆ ತದನಂತರ ಹಂತ ಹಂತವಾಗಿ ಲಘುವಾಹನಗಳನ್ನು ಮೇಲಸೇತುವೆ ಮೇಲೆ ಚಲಾವಣೆಗೆ ಅವಕಾಶ ಕಲ್ಪಿಸಿಕೋಡಲಾಗುತ್ತದೆ. ಮತ್ತು ಇಗಾಗ್ಲೇ ಇದಕ್ಕೆ ಎಷ್ಟು ಕೇಬಲ್ ಬೇಕು ಎಂಬುದುನ್ನು ಐಐಎಸ್ಸಿ ತಜ್ಞರು ಅಂದಾಜಿಸಿದ್ದಾರೆ. ಅಂದಾಜು ಒಟ್ಟು 900  ಟನ್ ಕೇಬಲ್ ಅವಶ್ಯಕತೆ ಇದೆ.ಇಗಾಗ್ಲೇ 500 ಟನ್ ಕೇಬಲ್ ನಗರಕ್ಕೆ ಬಂದಿದೆ.ಅಂತ ಐಐಎಸ್ಸಿ ತಜ್ಞ ಚಂದ್ರಕಿಶನ್ ತಿಳಿಸಿದ್ರು.
 
ಒಟ್ಟಾರೆಯಾಗಿ ಕಳದ ಒಂದುವರೆ ವರ್ಷಗಳಿಂದ ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಅಕಿದ್ದ ಪೀಣ್ಯ ಮೇಲಸೇತುವೆ ಕೇಬಲ್ ಅಳವಡಿಕೆ ಕಾರ್ಯ ಮುಂದುವರೆಸಿದ್ದು,ಮುಂದಿನ ಮೂರು ತಿಂಗಳಲ್ಲಿ ಸಾರ್ವಜನಿಕರಿಗೆ ಓಡಾಡುವುದಕ್ಕೆ ಮುಕ್ತವಾಗಲಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ‌ ಮಾಡುತ್ತಿದ್ದ ವೇಳೆ ಮ್ಯಾನ್ ಹೋಲ್ ಗೆ ಬಿದ್ದ ಬಿಬಿಎಂಪಿ ಸ್ವಚ್ಚತಾ ಸಿಬ್ಬಂದಿ