Publish Date: Sun, 04 Jun 2023 (17:40 IST)
Updated Date: Sun, 04 Jun 2023 (17:47 IST)
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹೊಸಕೋಟೆ ನಗರದ ಎಚ್ ಜೆ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿವರವನ್ನು ಆಯೋಜಿಸಲಾಗಿತ್ತು .ಪ್ರೇರಣ ಪ್ರತಿಷ್ಠಾನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ಹೊಸಕೋಟೆ ನಗರದ ಎಸ್ ಜೆ ಎಸ್ ಎಸ್ ಕಲ್ಯಾಣ ಮಂಟಪದಲ್ಲಿ ಪ್ರೇರಣ ಪ್ರತಿಷ್ಠಾನ ಪದಾಧಿಕಾರಿಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿ ಇಡೀ ವಿಶ್ವದಲ್ಲೇ ರಕ್ತಕ್ಕೆ ಪರ್ಯಾಯ ಮಾರ್ಗವಿಲ್ಲದೆ ಕಾರಣ ರಕ್ತದಾನ ಮಹತ್ವದ್ದಾಗಿದೆ ದಿನನಿತ್ಯ ನೂರಾರು ಹಾಗೂ ಸಾವಿರಾರು ಜನರು ವಿವಿಧ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಇಂಥ ವ್ಯಕ್ತಿಗಳು ಎರಡು ತಿಂಗಳಿಗೊಮ್ಮೆ ಮೂರು ತಿಂಗಳಿಗೊಮ್ಮೆ ರಕ್ತ ಬೇಕಾಗುತ್ತದೆ ಇಂಥ ವ್ಯಕ್ತಿಗಳಿಗೆ ಪ್ರೇರಣ ಪ್ರತಿಷ್ಠಾನ ವತಿಯಿಂದ ಉಚಿತ ರಕ್ತ ನೀಡಲಾಗುತ್ತಿದೆ .
ಪ್ರಪಂಚದ ಯಾವುದೇ ಮೂಲೆಗೆ ಹೋದರು ಸಹಿತ ಗಾಯಾಳುಗಳಿಗೆ ಹಾಗೂ ರೋಗಿಗಳಿಗೆ ರಕ್ತ ಬೇಕಾಗುತ್ತದೆ ಆದ್ದರಿಂದ
ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರವನ್ನು ಆಯೋಜಿಸಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಜೀವ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕೆಲಸ ಮಾಡಬೇಕೆಂದು ಮನವಿ ಮಾಡಿದರು