Publish Date: Wed, 06 Feb 2019 (15:31 IST)
Updated Date: Wed, 06 Feb 2019 (15:32 IST)
ಕಳೆದ ಹದಿನೈದು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ನಮಗೆ ಭದ್ರತೆ ನೀಡಬೇಕೆಂದು ಉಪನ್ಯಾಸಕರು ಆಗ್ರಹ ಮಾಡಿದ್ದಾರೆ.
ನಮಗೆ ಭದ್ರತೆ ಒದಗಿಸಬೇಕು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಜಿಲ್ಲಾ ಸಮನ್ವಯ ಸಮಿತಿ ಆಗ್ರಹಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ.ಟಿ.ದುರುಗಪ್ಪ, ರಾಜ್ಯ ಸರ್ಕಾರ ಫೆ.8 ರಂದು ನಡೆಯಲಿರುವ ಬಜೆಟ್ ನಲ್ಲಿ ಆರ್ಥಿಕ ಅನುದಾನ ಒದಗಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಐನೂರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಇದ್ದೇವೆ. ರಾಜ್ಯದಲ್ಲಿ 14 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಮಾಸಿಕ ವೇತನ ಪ್ರತಿತಿಂಗಳೂ ವಿತರಿಸಬೇಕು. 7 ನೇ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ರೂ.50 ಸಾವಿರ ಗೌರವ ಧನ ನೀಡಬೇಕು. ಬಾಕಿ ಇರುವ ಮಾಸಿಕ ವೇತನ ನೀಡಬೇಕೆಂದು ಆಗ್ರಹಿಸಿದರು.