Select Your Language

Notifications

webdunia
webdunia
webdunia
webdunia

ಸಹೋದರ ಡಿಕೆ ಸುರೇಶ್‌ ಸೋಲಿನ ಹೊಣೆ ಹೊತ್ತ ಡಿಕೆಶಿಗೆ ಕೆಪಿಸಿಸಿ ಸ್ಥಾನದ ಅಭದ್ರತೆ

ಸಹೋದರ ಡಿಕೆ ಸುರೇಶ್‌ ಸೋಲಿನ ಹೊಣೆ ಹೊತ್ತ ಡಿಕೆಶಿಗೆ ಕೆಪಿಸಿಸಿ ಸ್ಥಾನದ ಅಭದ್ರತೆ

sampriya

ಬೆಂಗಳೂರು , ಮಂಗಳವಾರ, 4 ಜೂನ್ 2024 (14:57 IST)
ಬೆಂಗಳೂರು: ರಾಜ್ಯ ಲೋಕಸಭಾ ಕ್ಷೇತ್ರದಲ್ಲಿ ಹೈವೋಲ್ಟೇಜ್‌ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ವಿರುದ್ಧ ಕಾಂಗ್ರೆಸ್‌ನ ಅಭ್ಯರ್ಥಿ ಡಿಕೆ ಸುರೇಶ್‌ಗೆ ಹೀನಾಯ ಸೋಲು ಆಗಿದೆ. ಈ ಮೂಲಕ ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಸಹೋದರ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗುವ ಕನಸು ನುಚ್ಚು ನೋರಾಗಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಈ ಬಾರಿಯೂ ಗೆಲುವು ಸಾಧಿಸಲಿದೆ ಎಂದು ಕಾಂಗ್ರೆಸ್‌ ನಾಯಕರು ಸಾಕಷ್ಟು ನಿರೀಕ್ಷೆಯಲ್ಲಿದ್ದರು. ಈ ಬಾರಿಯೂ ಡಿಕೆ ಸುರೇಶ್‌ ಅವರು ಗೆಲುವಿನ ನಗೆ ಬೀರುತ್ತಾರೆಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಪಾಳಯಕ್ಕೆ ಭಾರೀ ಆಘಾತವಾಗಿದೆ.

ಇನ್ನೂ ಸಹೋದರ ಡಿಕೆ ಸುರೇಶ್‌ ಅವರನ್ನು ಗೆಲ್ಲಿಸಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಒಂದು ಗೆಲುವು ತಂದುಕೊಡುವ ಗುರಿಯಲ್ಲಿದ್ದ ಡಿಕೆ ಶಿವಕುಮಾರ್‌ ಅವರಿಗೆ ಭಾರೀ ಮುಖಭಂಗವಾಗಿದೆ. ಇದೀಗ ಸಹೋದರ ಸುರೇಶ್‌ ಅವರ ಹೀನಾಯ ಸೋಲಿನ ಹೊಣೆ ಹೊತ್ತಿರುವ ಡಿಕೆ ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.

ರಾಜ್ಯದ ಉಪಮುಖ್ಯಮಂತ್ರಿಯಾಗಿ, ಕಾಂಗ್ರೆಸ್‌ನ ಅಧ್ಯಕ್ಷನಾಗಿ ಸಹೋದರನನ್ನು ಗೆಲ್ಲಿಸಲು ಸೋತಿರುವ ಡಿಕೆಶಿ ಅವರ ಸ್ಥಾನದ ಅಭದ್ರತೆ ಎದುರಾಗಿದ್ದು, ಇದೀಗ ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

 ಇನ್ನೂ ಡಿಕೆ ಸುರೇಶ್‌ ಗೆಲುವಿಗೆ ಡಿಕೆಶಿ ಸೇರಿದಂತೆ ಅವರ ನಿರಂತರ ಪ್ರಚಾರ ನಡೆಸಿ, ಮತದಾರರಲ್ಲಿ ಬೆಂಬಲ ಕೋರಿದ್ದರು. ಇನ್ನೂ ಡಿಕೆಶಿ  ಅವರ ಪ್ಲಾನ್‌ ಪ್ರಕಾರ ಸುರೇಶ್‌ ಅವರು ಭಾರೀ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದರು.

ಅದಲ್ಲದೆ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ ಅವರನ್ನು ಸೋಲಿಸಲು ಮಂಜುನಾಥ್‌ ಹೆಸರಿನ ನಾಲ್ವರನ್ನು ಕಣಕ್ಕೆ ಇಳಿಸಲಾಯಿತು. ಆದರೆ ಇದು ಯಾವುದೇ ತಂತ್ರ ಫಲಿಸದೆ ಮಾಜಿ ಪ್ರಧಾನಿ ಎಚ್‌ ದೇವೇಗೌಡರ ಅಳಿಯ ವೈದ್ಯ ಡಾ.ಸಿ.ಎನ್‌ ಮಂಜುನಾಥ್‌ ಅವರು ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ.

ಡಿಕೆ ಬ್ರದರ್ಸ್‌ ಎಂದು ಖ್ಯಾತಿ ಪಡೆದಿರುವ ಡಿಕೆ ಶಿವಕುಮಾರ್‌ ಹಾಗೂ ಡಿಕೆ ಸುರೇಶ್‌ ಅವರು ವಿಪಕ್ಷಗಳನ್ನು ಹೊಡೆದುರುಳಿಸಲು ಮಾಸ್ಟರ್‌ ಪ್ಲಾನ್‌ ಮಾಡುತ್ತಾರೆ. ಆದರೆ ಸಹೋದರನಿಗೆ ಲೋಕಸಭೆ ಚುನಾವಣೆಯಲ್ಲಿ ಸೋಲಾಗುವ ಮೂಲಕ ಡಿಕೆ ಶಿವಕುಮಾರ್‌ ಅವರ ರಾಜಕೀಯ ಜೀವನದಲ್ಲಿ ದೊಡ್ಡ ಸೋಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು: ಸುರೇಶ್ ಗೋಪಿ ಮೇಲೆ ಜನರಿಗ್ಯಾಕೆ ಒಲವು