Select Your Language

Notifications

webdunia
webdunia
webdunia
webdunia

ಡ್ರೈವರ್ ಕುಡಿತಕ್ಕೆ ಅಮಾಯಕ‌ ಜೀವ ಬಲಿ

drunk driving
bangalore , ಶುಕ್ರವಾರ, 13 ಅಕ್ಟೋಬರ್ 2023 (16:24 IST)
ಮಕ್ಕಳು ಶಾಲಾ ವಾಹನದಲ್ಲಿ ಬರ್ತಾರೆ ನಮಗೇನು ಟೆನ್ಷನ್ ಇಲ್ಲ.ಹೀಗಂತ ಸುಮ್ಮನೆ ಮನೆಯಲ್ಲಿ ಇರಬೇಡಿ.ಯಾಕಂದ್ರೆ ನಿಮ್ಮ‌ ಮಕ್ಕಳು ಬರೋ ಶಾಲಾ ವಾಹನದ ಡ್ರೈವರ್ ಹೀಗೂ ಇರಬಹುದು ಎಚ್ಚರ.ಶಾಲಾ ವಾಹನದ ಡ್ರೈವರ್ ಅಮಾಯಕ ಜೀವ ಬಲಿ ಪಡೆದಿದ್ದಾನೆ.
 
 
ಡ್ರೈವರ್ ಕುಡಿತಕ್ಕೆ ಅಮಾಯಕ‌ ಜೀವ ಬಲಿಯಾಗಿದೆ.ಕುಡಿದು ಶಾಲಾ ಬಸ್ ಚಾಲಕ ವಾಹನ ಓಡಿಸಿದ್ದಾನೆರಸ್ತೆಯಲ್ಲಿ‌ ನಡೆದು ಹೋಗ್ತಿದ್ದವನಿಗೆ ಬಸ್  ಡಿಕ್ಕಿ ಹೊಡೆದಿದೆ.ಅಕ್ಟೋಬರ್ 10 ರಂದು  ಮಧ್ಯಾಹ್ನ 12: 30 ಕ್ಕೆ ನಡೆದ ಘಟನೆ ನಡೆದಿದ್ದು,ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುವ ವೇಳೆ ಘಟನೆ ನಡೆದಿದೆ.
 
ಡ್ರೈವ್ ಮಾಡೋವಾಗ ಕಂಠಪೂರ್ತಿ ಡ್ರೈವರ್ ಸುಭಾಷ್(30) ಕುಡಿದಿದ್ದ.ಕುಡಿದ ಮತ್ತಿನಲ್ಲೇ 25 ಮಕ್ಕಳನ್ನು ಕೂರಿಸಿಕೊಂಡು ಚಾಲನೆ  ಮಾಡಿದ.ಈತನ ಕುಡಿತದ ಚಾಲನೆಗೆ ಆಂಜಿನಪ್ಪ ಎಂಬ ವ್ಯಕ್ತಿ ಬಲಿಯಾಗಿದ.ಮೆಡಿಕಲ್ ಶಾಪ್ ನಿಂದ ಮನೆಗೆ ಆಂಜಿನಪ್ಪ ತೆರಳುತ್ತಿದ್ದ. ದೊಡ್ಡಬಾಣಸವಾಡಿ ಬಳಿ ಮಧ್ಯಾಹ್ನ  ಘಟನೆ ನಡೆದಿದೆ.ಆಂಜಿನಪ್ಪಗೆ ಗುದ್ದುವ ಮೊದಲು ಮಹಿಳೆಗೂ  ಆರೋಪಿ ಸುಭಾಷ್ ಗುದ್ದಿದ್ದಾನೆ.ಗಾಯಾಳು ಆಂಜಿನಪ್ಪನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದ್ರೆಚಿಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್ 11 ರಂದು ಸಾವನಾಪ್ಪಿದ್ದಾನೆ.ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಚಾಲಕ ಸುಭಾಷ್ ರನ್ನ ಬಾಣಸವಾಡಿ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸದ್ದಿಲ್ಲದೇ ಏರಿಕೆಯಾಗ್ತಿದೆ ಡೆಂಗ್ಯೂ