Webdunia - Bharat's app for daily news and videos

Install App

ಕ್ಯಾನ್ಸರ್‌ ಮಹಾಮಾರಿಗೆ ಗೋಮೂತ್ರ ಬಳಕೆ ಮಾಡುವಂತೆ ಸೂಚನೆ

geetha
ಶನಿವಾರ, 13 ಜನವರಿ 2024 (18:02 IST)
ಬೆಂಗಳೂರು : ಕ್ಯಾನ್ಸರ್‌ ಮಹಾಮಾರಿಗೆ ಗೋಮೂತ್ರ ಬಳಕೆಯ ಬಗ್ಗೆ ಆಯುರ್ವೇದದಲ್ಲಿಯೂ ಉಲ್ಲೇಖವಿದೆ. ನಮ್ಮ ಸಂಸ್ಥೆಯು ಗೋಮೂತ್ರ ಬಳಸಿ ಮೌತ್‌ ಗಾರ್ಗಲ್‌  (ಬಾಯಿ ಮುಕ್ಕಳಿಸುವ ದ್ರಾವಣ) ತಯಾರಿಸಿದೆ ಎಂದ ರಾಜಾರಾಮ್ ಹೇಳಿದ್ದಾರೆ. ಇದರಿಂದ ಹಲ್ಲು, ಒಸಡುಗಳ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ, ಹಸುವಿನ ಮೂತ್ರ ಬಳಸಿ ಬಾಯಿ ವಾಸನೆಯನ್ನೂ ನಿವಾರಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.ಶ್ರೀರಾಮಚಂದ್ರಾಪುರ ಮಠದ ಗುರುಗಳಾದ ರಾಘವೇಶ್ವರ ಭಾರತಿ ಅವರ ಸಲಹೆ ಮತ್ತು ಆಶೀರ್ವಾದದಿಂದ ಈ ಉತ್ಪನ್ನಗಳನ್ನು ತಯಾರಿಸಿರುವುದಾಗಿ ರಾಜಾರಾಮ್‌ ಹೇಳಿದ್ದಾರೆ. 

ಹಸುವಿನ ಸಗಣಿ ಮತ್ತು ಗಂಜಲಗಳಿಂದ ಹಲವು ಉತ್ಪನ್ನಗಳನ್ನು ತಯಾರಿಸುತ್ತಿರುವ ಜೇಡ್ಲ ಆರ್ಗಾನಿಕ್ಸ್‌ ಎಂಬ ಸಂಸ್ಥೆ ಈಗ ಹೊಸದೊಂದು ಅವಿಷ್ಕಾರದ ಮೂಲಕ ಜನರನ್ನು ಅಚ್ಚರಿಗೆ ನೂಕಿದೆ . ಗೋಮೂತ್ರದಿಂದ ಮೌತ್‌ ಫ್ರೆಶನರ್‌ ಮಾತ್ರವಲ್ಲದೇ ಸುಗಂಧ ದೃವ್ಯ ತಯಾರಿಕೆಯಲ್ಲಿಯೂ ತೊಡಗಿಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೇಡ್ಲ ಆರ್ಗಾನಿಕ್ಸ್‌ ಸಂಸ್ಥೆಯ ಮುಖ್ಯಸ್ಥರಾದ ರಾಜಾರಾಮ್‌ ಅವರು, ಗೋಮೂತ್ರ ಬಳಕೆಗೆ ತುಂಬಾ ಕಷ್ಟ. ಅದನ್ನು ಹೇಗೆ ಕುಡಿಯುವುದು , ಹೇಗೆ ಬಳಸುವುದು ಎಂದು ಜನರಲ್ಲಿ ತಾತ್ಸಾರವಿರುತ್ತದೆ. ಅಂಥವರಿಗಾಗಿ ನಾವು ಗೋಮೂತ್ರದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments