Select Your Language

Notifications

webdunia
webdunia
webdunia
Sunday, 13 April 2025
webdunia

ವಿಶ್ವದಾಖಲೆ ಬರೆದ ಐಪಿಎಲ್‌ ಜೆರ್ಸಿ!

ipl Guinness Book of World Records jersey ಐಪಿಎಲ್‌ ಗಿನ್ನೆಸ್‌ ಬುಕ್‌ ವಿಶ್ವದಾಖಲೆ ಜೆರ್ಸಿ
bengaluru , ಸೋಮವಾರ, 30 ಮೇ 2022 (15:26 IST)
ಐಪಿಎಲ್‌ ಟಿ-20 ಟೂರ್ನಿಯ ಫೈನಲ್‌ ಪಂದ್ಯದ ವೇಳೆ ಅಹಮದಾಬಾದ್‌ ಕ್ರೀಡಾಂಗಣದಲ್ಲಿ ಹಾಕಲಾಗಿದ್ದ ಜೆರ್ಸಿ ವಿಶ್ವದ ಅತೀ ದೊಡ್ಡ ಜೆರ್ಸಿ ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ.
ಐಪಿಎಲ್‌ ಟಿ-20 ಟೂರ್ನಿಯ ನಿರೂಪಕರಾಗಿ ಕಾರ್ಯ ನಿರ್ವಹಿಸಿದ ಭಾರತ ತಂಡದ ಮಾಜಿ ಕೋಚ್‌ ರವಿಶಾಸ್ತ್ರಿ, ಈ ಜೆರ್ಸಿ ವಿಶ್ವದ ಅತೀ ದೊಡ್ಡ ಜೆರ್ಸಿ ಎಂದು ಘೋಷಿಸಿದರು.
ಫೈನಲ್‌ ಪಂದ್ಯಕ್ಕೂ ಮುನ್ನ ನಡೆದ ಸಮಾರೋಪ ಸಮಾರಂಭದ ವೇಳೆ ಮೈದಾನದಲ್ಲಿ ಜೆರ್ಸಿಯನ್ನು ಪ್ರದರ್ಶಿಸಲಾಗಿದ್ದು, ಇದು 66x44 ಮೀಟರ್‌ ಅಳತೆಯದ್ದಾಗಿದೆ.
ಜೆರ್ಸಿ ನಂಬರ್‌ 15 ಆಗಿದ್ದು, ಇದು ೧೫ನೇ ಆವೃತ್ತಿಯ ಜೆರ್ಸಿ ಎಂದು ಬಿಂಬಿಸಲಾಗಿದೆ. ಅಲ್ಲದೇ ಈ ಜೆರ್ಸಿಯಲ್ಲಿ 10 ತಂಡಗಳ ಲೋಗೋ ಬಳಸಲಾಗಿದೆ.
ಅಹಮದಾಬಾದ್‌ ಕ್ರೀಡಾಂಗಣ ಅತೀ ದೊಡ್ಡ ಕ್ರೀಡಾಂಗಣವಾಗಿದ್ದು, 1.32 ಲಕ್ಷ ಆಸನ ಸಾಮರ್ಥ್ಯ ಹೊಂದಿದ್ದು, ಆತಿಥೇಯ ಗುಜರಾತ್‌ ಟೈಟಾನ್ಸ್‌ ತಂಡ 7 ವಿಕೆಟ್‌ ಗಳಿಂದ ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೋಲಿಸಿ ಮೊದಲ ಪ್ರವೇಶದಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್‌ 21ರಂದು ಮೈಸೂರಿಗೆ ಪ್ರಧಾನಿ ಮೋದಿ ಭೇಟಿ