Webdunia - Bharat's app for daily news and videos

Install App

ಆನೆಯ ಜೀವ ಉಳಿಸಿದ ಭಾರತೀಯ ಸೇನೆ

Webdunia
ಭಾನುವಾರ, 12 ಫೆಬ್ರವರಿ 2023 (18:50 IST)
ಉತ್ತರಾಖಂಡದಲ್ಲಿ 35 ವರ್ಷದ ಆನೆಯ ಜೀವ ಉಳಿಸಲು ಎನ್​ಜಿಒದೊಂದಿಗೆ ಭಾರತೀಯ ಸೇನೆಯು ಕೈಜೋಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಆನೆಯ ಹೆಸರು ಮೋತಿ. ವಯೋಸಹಜ ಕಾರಣದಿಂದ ನಿತ್ರಾಣಗೊಂಡಿದ್ದ ಇದು ವೈಲ್ಡ್​ಲೈಫ್​ ಎಸ್​ಒಎಸ್​ ಮತ್ತು ಸೇನೆಯ ಆರೈಕೆ ಮತ್ತು ಚಿಕಿತ್ಸೆಯ ಪರಿಣಾಮವಾಗಿ ಚೇತರಿಸಿಕೊಳ್ಳುತ್ತಿದೆ. ಉತ್ತರಾಖಂಡದ ರಾಮನಗರ ಜಿಲ್ಲೆಯಲ್ಲಿ ಮೋತಿ ಕುಸಿದು ಬೀಳುತ್ತಿದ್ದಂತೆ ಗಂಭೀರವಾಗಿ ಅಸ್ವಸ್ಥಗೊಂಡಿತು. ಆಗ ಮಾಜಿ ಸೇನಾ ಮುಖ್ಯಸ್ಥ ವಿ ಕೆ ಸಿಂಗ್​ ಭಾರತೀಯ ಸೇನೆಯ ಸಹಾಯ ಕೋರಿದರು. ಭಾರತೀಯ ಸೇನೆಯ ಎಂಜಿನಿಯರ್​ಗಳ ತಂಡವು ಮೋತಿಗೆ ಅವಶ್ಯಕವಿರುವ ಚಿಕಿತ್ಸೆಗೆ ಸಹಾಯ ಮಾಡಿತು. 24 ಗಂಟೆಗಳೊಳಗೆ ಅದು ಎದ್ದು ನಿಲ್ಲಲು ಬೇಕಾದ ತಾಂತ್ರಿಕ ಸಹಾಯವನ್ನು ಈ ತಂಡ ಮಾಡಿತು. ಮೋತಿ ಭಿಕ್ಷೆ ಬೇಡಲು ಸಹಕರಿಸುವ ಆನೆ. 35 ವರ್ಷಗಳ ತನಕ ಎಣಿಕೆಗೆ ಸಿಗದಷ್ಟು ಸಾರ್ವಜನಿಕ ಸವಾರಿ ಪೂರೈಸಿದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments