Select Your Language

Notifications

webdunia
webdunia
webdunia
webdunia

ಚೀನಾಕ್ಕೆ ಔಷಧ ರಫ್ತಿಗೆ ಭಾರತ ಸಿದ್ಧ

ಚೀನಾಕ್ಕೆ ಔಷಧ ರಫ್ತಿಗೆ ಭಾರತ ಸಿದ್ಧ
bangalore , ಶುಕ್ರವಾರ, 23 ಡಿಸೆಂಬರ್ 2022 (16:26 IST)
ಚೀನಾದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದೆ. ಆದ್ದರಿಂದ ಆ ದೇಶಕ್ಕೆ ಜ್ವರದ ಔಷಧಗಳನ್ನು ರಫ್ತು ಮಾಡಲು ಸಿದ್ಧ ಎಂದು ಭಾರತದ ಔಷಧ ರಫ್ತು ಮಂಡಳಿ ತಿಳಿಸಿದೆ. ಚೀನಾದಲ್ಲಿ ಈ ತಿಂಗಳ ಆರಂಭದಲ್ಲಿ ಕೊವಿಡ್ ಪ್ರಕರಣಗಳಲ್ಲಿ ದಿಢೀರ್ ಏರಿಕೆ ಕಂಡಿದ್ದು, ಜ್ವರದ ಔಷಧಗಳಿಗೆ ಹಾಗೂ ಕೊವಿಡ್ ಪರೀಕ್ಷಾ ಕಿಟ್​​​ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಮೆಡಿಕಲ್​​ಗಳಲ್ಲಿ ಖರೀದಿಗಳ ಮೇಲೆ ಮಿತಿ ಹೇರಲಾಗಿದ್ದು, ಉತ್ಪಾದನೆ ಹೆಚ್ಚಿಸುವಂತೆ ಔಷಧ ತಯಾರಿಕಾ ಕಂಪನಿಗಳಿಗೆ ಸೂಚಿಸಲಾಗಿತ್ತು. ಐಬ್ರೂಫೇನ್ ಮತ್ತು ಪ್ಯಾರಾಸಿಟಮೋಲ್​​ ಔಷಧ ತಯಾರಿಕಾ ಕಂಪನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಎರಡು ಔಷಧಗಳ ಕೊರತೆ ಚೀನಾದಲ್ಲಿದ್ದು, ಬೇಡಿಕೆ ಹೆಚ್ಚಾಗಿದೆ ಎಂದು ಭಾರತೀಯ ಔಷಧ ರಪ್ತು ಉತ್ತೇಜನಾ ಮಂಡಳಿಯ ಅಧ್ಯಕ್ಷ ಶಾಹಿಲ್ ಮುಂಜಲ್ ತಿಳಿಸಿದ್ದಾರೆ. ಈ ಕುರಿತು ನವದೆಹಲಿಯಲ್ಲಿರುವ ಚೀನಾದ ರಾಯಭಾರ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಔಷಧ ತಯಾರಿಸುವ ದೇಶವಾಗಿ ಭಾರತ ಗುರುತಿಸಿಕೊಂಡಿದ್ದು, ಚೀನಾಕ್ಕೆ ಔಷಧ ರಫ್ತು ಮಾಡಲು ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ 185 ಹೊಸ ಕೊವಿಡ್​ ಕೇಸ್​​​