Select Your Language

Notifications

webdunia
webdunia
webdunia
webdunia

ಭಾರತ್‌ ಅಕ್ಕಿ ಬೇಳೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

ಭಾರತ್‌ ಅಕ್ಕಿ

geetha

bangalore , ಭಾನುವಾರ, 18 ಫೆಬ್ರವರಿ 2024 (19:30 IST)
ಬೆಂಗಳೂರು : ಕೇಂದ್ರ ಸರ್ಕಾರದ ಯೋಜನೆ ಆರಂಭದಲ್ಲಿಯೇ ಎಡವಿ ಬಿದ್ದಿದೆ. 60 ರೂ. ಗಳಿಗೆ ಭಾರತ್‌ ತೊಗರಿ ಬೇಳೆ ಹಾಗೂ 29 ರೂ. ಗಳಿಗೆ ಭಾರತ್‌ ಅಕ್ಕಿ ಪ್ರತಿ ಕೆಜಿಗೆ ದೊರೆಯುವುದೆಂದು ಕಾದಿದ್ದ ಗ್ರಾಹಕರಿಗೆ ಪೂರೈಕೆಯ ಅಭಾವದ ನಿರಾಸೆ ಉಂಟು ಮಾಡಿದೆ.ಬೆಂಗಳೂರು ಸೇರಿದಂತೆ ಹಲವೆಡೆ ಯೋಜನೆ ಉದ್ಘಾಟನಗೊಂಡ ದಿನ ಸಾಂಕೇತಿಕವಾಗಿ ನೀಡಲು 100  ಚೀಲಗಳನ್ನು ಪೂರೈಸಲಾಗಿತ್ತು. ಬಳಿಕ ಎಲ್ಲೂ ಸಹ ಭಾರತ್‌ ಅಕ್ಕಿ ಮತ್ತು ಭಾರತ್‌ ಬೇಳೆ ಕಾಣಿಸಿಕೊಂಡಿಲ್ಲ. 

ಸೂಪರ್‌ ಮಾರ್ಕೆಟ್‌ ಮತ್ತು ಇ-ಕಾಮರ್ಸ್‌ ಮುಖಾಂತರವೂ ಮಾರಾಟ ಮಾಡುವುದಲ್ಲದೇ ತೆರೆದ ವಾಹನಗಳಲ್ಲಿ ನಗರದ ಪ್ರತಿ ಮುಖ್ಯರಸ್ತೆಗಳಲ್ಲೂ ಭಾರತ್‌ ಅಕ್ಕಿ ಮತ್ತು ಬೇಳೆ ಮಾರಾಟ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಹಣದುಬ್ಬರದಿಂದಾಗಿ ಪ್ರತಿ ಅಕ್ಕಿ ಕೆಜಿಗೆ ಕನಿ‍ಷ್ಠ 50 ರೂ. ಹಾಗೂ ತೊಗರಿ ಬೇಳೆ ಪ್ರತಿಕೆಜಿಗೆ 150 ರೂ. ತಲುಪಿದೆ. ಇದರಿಂದಾಗಿ ಕಡಿಮೆ ಬೆಲೆಯಲ್ಲಿ ಆಹಾರ ಧಾನ್ಯ ಕೊಳ್ಳಲು ಉತ್ಸುಕರಾಗಿದ್ದ ಗ್ರಾಹಕರಿಗೆ ನಿರಾಶೆಯುಂಟಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗ್ಯಾರೆಂಟಿಗಳಿಂದ ಬಡವಾಯ್ತಾ ಸರ್ಕಾರ..!