Select Your Language

Notifications

webdunia
webdunia
webdunia
webdunia

ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ

ಜನವರಿಯಲ್ಲಿ ಆದಿಯೋಗಿ ಪ್ರತಿಮೆ ಲೋಕಾರ್ಪಣೆ
ಚಿಕ್ಕಬಳ್ಳಾಪುರ , ಭಾನುವಾರ, 9 ಅಕ್ಟೋಬರ್ 2022 (19:53 IST)
ಇಶಾ ಫೌಂಡೇಶನ್ ವತಿಯಿಂದ ರಾಜ್ಯದಲ್ಲೂ ಆದಿ ಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಉದ್ಘಾಟನಾ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಸಾಕ್ಷಿಯಾದರು.
 
ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿ ಇಶಾ ಫೌಂಡೇಶನ್ ವತಿಯಿಂದ ತಮಿಳುನಾಡಿನ‌ ಕೊಯಮತ್ತೂರಿನಲ್ಲಿರುವಂತೆ 112 ಅಡಿಯ ಆದಿಯೋಗಿ ಶಿವನ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯವಾಗಿದೆ.ಅದಿಯೋಗಿ ಶಿವನ ಅವತಾರದ ಪ್ರತಿಮೆ ನಿರ್ಮಾಣದ ಕಾರ್ಯದ ಅಂಗವಾಗಿ ಇಶಾ ಫೌಂಡೇಶನ್ ವತಿಯಿಂದ ಮೊದಲ ಕಾರ್ಯಕ್ರಮವಾಗಿ ನಾಗಮಂಟಪ ಲೋಕಾರ್ಪಣೆ  ನೇರವೇರಿತು. ಕಾರ್ಯಕ್ರಮಕ್ಕೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಕೆ ಸುಧಾಕರ್ ಆಗಮಿಸಿದ್ದರು.
ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನಾಗಮಂಟಪ ಪೂಜಾ ಕೈಂಕರ್ಯಗಳನ್ನು ನಡೆಸಿ ಲೋಕಾರ್ಪಣೆಗೊಳಿಸಿದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪೂಜಾ ಕೈಂಕರ್ಯಗಳನ್ನ 
ಸಿಎಂ ಬೊಮ್ಮಾಯಿ ಹಾಗೂ ಸಚಿವ ಸುಧಾಕರ್ ಕಣ್ತುಂಬಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ ಅ.11ರವರೆಗೆ ರಾಜ್ಯಾದ್ಯಂತ ಬಾರಿ ಮಳೆಯಾಗುವ ಸಾಧ್ಯತೆ