Webdunia - Bharat's app for daily news and videos

Install App

ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಟಿಕೆಟ್ ಬಿಡುಗಡೆ 12 ಕ್ಷೇತ್ರ ಉಳಿಸಿಕೊಂಡ ನಾಯಕರು

Webdunia
ಗುರುವಾರ, 13 ಏಪ್ರಿಲ್ 2023 (20:06 IST)
ರಾಜ್ಯ ಬಿಜೆಪಿಯಲ್ಲಿ ಎರಡು ಹಂತದ ಪಟ್ಟಿ ಬಿಡುಗಡೆ ಆಗಿದೆ. 224 ಕ್ಷೇತ್ರಗಳ ಪೈಕಿ 212 ಕ್ಷೇತ್ರಗಳ ಟಿಕೆಟ್ ಬಿಡುಗಡೆಯಾಗಿದ್ದು,ಒಂದೇ ದಿನದ ಅಂತರದಲ್ಲಿ ಎರಡು ಪಟ್ಟಿ ಪ್ರಕಟಿಸಿದ್ದಾರೆ. ಇನ್ನೂ 12 ಕ್ಷೇತ್ರಗಳನ್ನ  ಉಳಿಸಿಕೊಂಡ ಹೈಕಮಾಂಡ್ ಬಿಜೆಪಿ ಎರಡನೇ ಪಟ್ಟಿಯಲ್ಲಿ 7  ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಹಾಲಿ ಶಾಸಕರ ಟಿಕೆಟ್ ಮಿಸ್ ಆದವರ ಸಂಖ್ಯೆ 17ಕ್ಕೆ ಏರಿದೆ..ಇದರ ಜೊತೆಗೆ ಮತ್ತೆ ಬಂಡಾಯದ ಬಿಸಿಯು ಹೆಚ್ಚಾಗ್ತಿದ್ದು ಪಕ್ಷ ಬಿಟ್ಟು ಹೊಗೊದಕ್ಕೆ ಹಲವು ನಾಯಕರನ್ನ ಸಮಾದಾನ ಪಡಿಸೋ ಪ್ರಯತ್ನಕ್ಕೂ ಮುಂದಾಗಿದ್ದಾರೆ .ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಹೈಕಮಾಂಡ್ ನಾಯಕರು೧೮೯ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬಿಡುಗಡೆ ಮಾಡಿತ್ತು. ತದ ನಂತರ ಒಂದೇ ದಿನದ ಅಂತರದಲ್ಲಿ 23 ಕ್ಷೇತ್ರಗಳಿಗೆ ಬಿಡುಗಡೆ ಮಾಡಿದ್ದು ೧೨ ಕ್ಷೇತ್ರಗಳನ್ನು ಇನ್ನೂ ಉಳಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ಇನ್ನೂ ಹೊಸ ಮುಖಗಳುಗೆ ಮಣೆ ಹಾಕುವ ಪ್ಲಾನ್ ನಲ್ಲಿದ್ದಾರೆ..

ಕಲಘಟಕಿ
ಹಾಲಿ ಶಾಸಕ - ಸಿಎಂ ನಿಂಬಣ್ಣನವರ್ ಗೆ ಟಿಕೆಟ್‌ ಮಿಸ್-
 * ಇತ್ತೀಚೆಗೆ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿದ್ದ ನಾಗರಾಜ್ ಚಬ್ಬಿಗೆ ಟಿಕೆಟ್*
ಹಾವೇರಿ( ಪ.ಜಾ)
ಶಾಸಕ ನೆಹರು ಓಲೆಕಾರ್ ಗೆ ಟಿಕೆಟ್ ಮಿಸ್- 
ಗವಿಸಿದ್ದಪ್ಪ ದ್ಯಾಮಣ್ಣನವರ್ ಗೆ ಟಿಕೆಟ್
ದಾವಣಗೆರೆ ಉತ್ತರ
 ಶಾಸಕ ರವೀಂದ್ರನಾಥ್ ಗೆ ಟಿಕೆಟ್ ಮಿಸ್,
 ಲೋಕಿಕೆರೆ ನಾಗರಾಜ್ ಗೆ ಟಿಕೆಟ್
ಮಾಯಕೊಂಡ
ಶಾಸಕ ಎಸ್ ಲಿಂಗಣ್ಣಗೆ ಟಿಕೆಟ್ ಮಿಸ್,
 ಬಸವರಾಜ್ ನಾಯಕ್ ಗೆ ಟಿಕೆಟ್
ಚನ್ನಗಿರಿ
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ಮಿಸ್, 
ಶಿವಕುಮಾರ್ ಗೆ ಟಿಕೆಟ್
ಬೈಂದೂರು
ಶಾಸಕ ಸುಕುಮಾರ್ ಶೆಟ್ಟಿಗೆ ಟಿಕೆಟ್ ಮಿಸ್, 
*ಗುರುರಾಜ್ ಗಂಟಿಹೋಳ್ ಗೆ ಟಿಕೆಟ್
 
ಮೂಡಿಗೆರೆ
 ಶಾಸಕ ಎಂಪಿ.. ಕುಮಾರಸ್ವಾಮಿ ಗೆ ಟಿಕೆಟ್ ಮಿಸ್,
 *ದೀಪಕ್ ದೊಡ್ಡಯ್ಯಗೆ ಟಿಕೆಟ್ ನೀಡಲಾಗಿದ್ದು

ಇನ್ನೂ ಬಿಜೆಪಿ ಬಾಕಿ ಉಳಿಸಿಕೊಂಡಿರುವ 12 ಕ್ಷೇತ್ರಗಳನ್ನ ಬಾಕಿ ಉಳಿಸಿಕೊಂಡಿದ್ದಾರೆ
 
1-ನಾಗಠಾಣಾ
2-ಸೇಡಂ 
3-ಮಾನ್ವಿ
4-ಕೊಪ್ಪಳ
5-ರೋಣ
6-ಹುಬ್ಬಳ್ಳಿ - ಧಾರವಾಡ ಕೇಂದ್ರ
7-ಹಗರಿಬೊಮ್ಮನಹಳ್ಳಿ
8-ಶಿವಮೊಗ್ಗ ನಗರ 
9-ಹೆಬ್ಬಾಳ 
10-ಗೋವಿಂದರಾಜನಗರ 
11-ಕೃಷ್ಣರಾಜ ನಗರ( ಮೈಸೂರು)
12-ಮಹದೇವಪುರ
 
ಹಾಲಿ 6 ಶಾಸಕರ ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿರುವ ಬಿಜೆಪಿ
 
1- ಸೇಡಂ - ರಾಜ್ ಕುಮಾರ್  ಪಾಟೀಲ್ ತೆಹಲ್ಕೂರ್
2- ರೋಣ - ಕಳಕಪ್ಪ ಬಂಡಿ
3- ಹುಬ್ಬಳ್ಳಿ - ಧಾರವಾಡ ಕೇಂದ್ರ - ಜಗದೀಶ್ ಶೆಟ್ಟರ್
4- ಶಿವಮೊಗ್ಗ ನಗರ - ಈಶ್ವರಪ್ಪ
5- ಗೋವಿಂದರಾಜನಗರ - ವಿ ಸೋಮಣ್ಣ
6- ಮಹದೇವಪುರ - ಅರವಿಂದ ಲಿಂಬಾವಳಿ

ಇನ್ನೂ ಎರಡು ಹಂತದಲ್ಲಿ ಅಳೆದು ತೂಗಿ ಸಾಕಷ್ಟು ಲೆಕ್ಕಾಚಾರ ಹಾಕಿದ ನಂತರ ಎರಡು ಹಂತದಲ್ಲಿ ಟಿಕೆಟ್ ಘೋಷಣೆ ಮಾಡಿದ್ದು ಕೆಲ ಹಿರಿಯ ನಾಯಕರಿಗೆ ಟಿಕೇಟ್ ನೀಡದಿರುವುದಕ್ಕೆ ಅಸಮಧಾನಗೊಂಡಿರುವ ನಾಯಕರು ಪಕ್ಷದ ನಾಯಕರ ವಿರುದ್ದ ಸೆಟೆದು ನಿಂತು ಬೇರೆ ಪಕ್ಷದತ್ತ ಚಿತ್ತಹರಿಸಿರೋದು ನಾಯಕರಿಗೆ ತಲೆಬಿಸಿ ಹೆಚ್ಚಾಗುವಂತೆ ಮಾಡಿದೆ. ಈ ಅಸಮಧಾನ ಹೆಚ್ಚಾದ ಬೆನ್ನಲ್ಲೇ ಸಂಧಾನ ಮಾಡಿ ಸಮಾಧಾನಗೊಳಿಸಿ ಇಲ್ಲವಾದಲ್ಲಿ ಕ್ಷೇತ್ರಗಳಲ್ಲಿ ಇಬ್ಬರ ಜಗಳದ ನಡುವೆ ಮೂರುನಯವರಿಗೆ ಲಾಭವಾಗೊದು ಬೇಡ ಅಂತಾ ರಾಜ್ಯ ನಾಯಕರಿಗೆ ಹೈಕಮಾಂಡ್ ಸಂದೇಶ ರವಾನಿಸುತ್ತಿದ್ದಂತೆ ರಾಜ್ಯ ನಾಯಕರು ಫುಲ್ ಆಕ್ಟಿವ್ ಆಗಿದ್ದಾರೆ‌

ಪಟ್ಟಿ ಬಿಡುಗಡೆಯಾದ ನಂತರ ಅಸಮಧಾನಗೊಂಡಿರುವ ನಾಯಕರ ವಿಚಾರವಾಗಿ ಮಾತಾನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಎಲ್ಲಾ ಟಿಕೆಟ್ ಘೋಷಣೆಯಾಗಿದೆ,ಸಹಜವಾಗಿ ಒಂದೆರಡು ಕಡೆ ಅಸಮಾಧಾನ ಇದೆ.ಅವರನ್ನು ಕರೆದು ಮಾತನಾಡುತ್ತೇನೆ. ಎಲ್ಲ ಸರಿ ಹೋಗುತ್ತದೆ ಎಂ.ಪಿ.ಕುಮಾರಸ್ವಾಮಿ ವಿಷಯಕ್ಕೆ ಸಿಡಿಮಿಡಿಗೊಂಡ ಬಿಎಸ್ ವೈ ಕುಮಾರಸ್ವಾಮಿಗೆ ಏನು ಕಡಿಮೆಯಾಗಿದೆ ಅವನಿಗೆ ಪಕ್ಷ ಎಲ್ಲ ಕೊಟ್ಟಿದೆ ನಾನು ಅವರನ್ನು ಕರೆದು ಮಾತನಾಡುತ್ತೇನೆ ಲಕ್ಷ್ಮಣ ಸವದಿ ವಿಷಯವೂ ಅಷ್ಟೆ ಮಾತನಾಡುತ್ತೇನೆ ಎಲ್ಲವೂ ಸರಿಹೋಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments