Select Your Language

Notifications

webdunia
webdunia
webdunia
webdunia

ಐಟಿ, ಇಡಿ ಮೋದಿ ಅಧೀನದಲ್ಲಿರುವುದರಿಂದ ಬಿಎಸ್‌ವೈಗೆ ಮಾಹಿತಿಯಿರಬೇಕು: ಕುಮಾರಸ್ವಾಮಿ

ಐಟಿ, ಇಡಿ ಮೋದಿ ಅಧೀನದಲ್ಲಿರುವುದರಿಂದ ಬಿಎಸ್‌ವೈಗೆ ಮಾಹಿತಿಯಿರಬೇಕು: ಕುಮಾರಸ್ವಾಮಿ
ಹುಬ್ಬಳ್ಳಿ , ಬುಧವಾರ, 21 ಡಿಸೆಂಬರ್ 2016 (17:40 IST)
ಸದ್ಯದಲ್ಲಿಯೇ ರಾಜ್ಯ ಸರಕಾರದ ಕೆಲವು ಸಚಿವರ ಬಣ್ಣ ಬಯಲಾಗಲಿದೆ ಎಂಬ ಬಿಎಸ್‌ವೈ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಬಹುಶಃ ಐಟಿ ಹಾಗೂ ಇಡಿ ಕೇಂದ್ರ ಸರಕಾರದ ಅಧೀನದಲ್ಲಿರುವುದರಿಂದ ಬಿಎಸ್‌ವೈ ಅವರಿಗೆ ಮಾಹಿತಿ ಲಭ್ಯವಾಗಿರಬೇಕು ಎಂದು ಮಾರ್ಮಿಕವಾಗಿ ನುಡಿದರು. 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ್ ಜೋಶಿ ವಿನಾಃ ಕಾರಣ ನನ್ನ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡಕ್ಕೆ ಶೆಟ್ಟರ್ ಹಾಗೂ ಜೋಶಿ ಅವರ ಕೊಡುಗೆ ಏನು? ಬೇಕಾದರೆ ಈ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲ್ ಎಸೆದಿದ್ದಾರೆ.
 
ಉತ್ತರ ಕರ್ನಾಟಕ ಭಾಗಕ್ಕೆ ಬಿಜೆಪಿ ಕೊಡುಗೆ ಶೂನ್ಯ. ನನ್ನ ಅಧಿಕಾರದ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಕಾನೂನು ವಿವಿ ಹಾಗೂ ಹೈ-ಕೋರ್ಟ್ ಪೀಠ ಸ್ಥಾಪಿಸಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಜೆಡಿಎಸ್ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೆತ್ತಲೆಯಾಗಿ ಓಡಾಡಿ ಎಂದು ನಾವೇನು ಹೇಳಿದ್ವಾ: ಸಿಎಂ ಉಡಾಫೆ