Select Your Language

Notifications

webdunia
webdunia
webdunia
webdunia

ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ಬರೆಯುವವರಿಗೆ ಮಹತ್ವದ ಸುದ್ದಿ

Students

Krishnaveni K

ಬೆಂಗಳೂರು , ಸೋಮವಾರ, 2 ಡಿಸೆಂಬರ್ 2024 (14:55 IST)
ಬೆಂಗಳೂರು: 2024-25 ನೇ ಸಾಲಿನ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವವರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಹತ್ವದ ಮಾಹಿತಿ ನೀಡಿದೆ.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಎಸ್ಎಸ್ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿದೆ. 2025 ರ ಮಾರ್ಚ್ 1 ರಿಂದ ಮಾರ್ಚ್ 19 ರವರೆಗೆ ದ್ವಿತೀಯ ಪಿಯುಸಿ ಮತ್ತು ಮಾರ್ಚ್ 20 ರಿಂದ ಏಪ್ರಿಲ್ 2 ರವರೆಗೆ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಯಲಿದೆ ಎಂದು ಪ್ರಕಟಣೆ ನೀಡಿದೆ.

ಆದರೆ ಇದು ತಾತ್ಕಾಲಿಕ ದಿನಾಂಕಗಳಾಗಿವೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಬದಲಾವಣೆಗಳಾದರೂ ಆಗಬಹುದು. ಆದರೆ ಸಾಮಾನ್ಯವಾಗಿ ತಾತ್ಕಾಲಿಕ ವೇಳಾಪಟ್ಟಿಯೇ ಅಂತಿಮವಾದ ಉದಾಹರಣೆಯೇ ಹೆಚ್ಚು. ಈ ವೇಳಾಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಬೋರ್ಡ್ ಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ.

ಎಸ್ಎಸ್ಎಲ್ ಸಿ ವೇಳಾಪಟ್ಟಿ
ಮಾರ್ಚ್ 20-ಫಸ್ಟ್ ಲ್ಯಾಂಗ್ವೇಜ್ ವಿಷಯಗಳು
ಮಾರ್ಚ್ 22- ಸಮಾಜ ವಿಜ್ಞಾನ
ಮಾರ್ಚ್ 24 – ದ್ವಿತೀಯ ಭಾಷಾ ವಿಷಯಗಳು
ಮಾರ್ಚ್ 27-ಗಣಿತ
ಮಾರ್ಚ್ 29- ತೃತೀಯ ಭಾಷಾ ವಿಷಯಗಳು
ಏಪ್ರಿಲ್ 2 – ವಿಜ್ಞಾನ

ದ್ವಿತೀಯ ಪಿಯುಸಿ
ಮಾರ್ಚ್ 1- ಕನ್ನಡ, ಅರೆಬಿಕ್
ಮಾರ್ಚ್ 3- ಗಣಿತ, ಶಿಕ್ಷಣ ಶಾಸ್ತ್ರ, ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
ಮಾರ್ಚ್ 4- ತಮಿಳು, ತೆಲುಗು, ಮಲಯಾಳಂ ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 5- ರಾಜ್ಯ ಶಾಸ್ತ್ರ, ಸಂಖ್ಯಾ ಶಾಸ್ತ್ರ
ಮಾರ್ಚ್ 8- ಹಿಂದಿ
ಮಾರ್ಚ್ 10- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಗೃಹ ವಿಜ್ಞಾನ
ಮಾರ್ಚ್ 12- ಮನಃಶಾಸ್ತ್ರ, ರಸಾಯನ ಶಾಸ್ತ್ರ, ಮೂಲಗಣಿತ
ಮಾರ್ಚ್ 13- ಅರ್ಥ ಶಾಸ್ತ್ರ
ಮಾರ್ಚ್ 15- ಇಂಗ್ಲಿಷ್
ಮಾರ್ಚ್ 17- ಭೂಗೋಳ ಶಾಸ್ತ್ರ, ಜೀವ ಶಾಸ್ತ್ರ
ಮಾರ್ಚ್ 18- ಸಮಾಜಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗಣಕ ವಿಜ್ಞಾನ
ಮಾರ್ಚ್ 19- ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೇಲ್, ಅಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು: ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ