ಅಕ್ರಮ ಸಂಬಂಧ– ಪ್ರಿಯಕರನಿಂದ ಗೃಹಿಣಿಯ ಕೊಲೆ?

ಭಾನುವಾರ, 17 ಡಿಸೆಂಬರ್ 2017 (18:27 IST)
ಬಳ್ಳಾರಿಯ ಹುಸೇನ್ ನಗರದ ಗೃಹಿಣಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದ್ದು ಆಕೆಯೊಂದಿಗೆ ಆಕ್ರಮ ಸಂಬಂಧ ಹೊಂದಿದ್ದ ಪ್ರಿಯಕರನೇ ಕೊಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
 
ಲೀಲಾವತಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ. ರಾಮು ಎಂಬ ವ್ಯಕ್ತಿ ಕೊಲೆ ಮಾಡಿದ್ದಾನೆ ಎಂದು ಲೀಲಾವತಿ ಅವರ ಸಹೋದರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
 
ರಾಮು ಕಳೆದ ಮೂರು ವರ್ಷಗಳ ಹಿಂದೆ ಲೀಲಾವತಿ ಪತಿ ಬಸವರಾಜರನ್ನು ಕೊಲೆ ಪ್ರಕರಣದಲ್ಲಿ 6 ತಿಂಗಳ ಶಿಕ್ಷೆ ಅನುಭವಿಸಿದ್ದ. ಲೀಲಾವತಿಗಾಗಿ ಆಕೆಯ ಪತಿಯನ್ನೇ ರಾಮು ಕೊಲೆ ಮಾಡಿದ್ದ, ಈಗ ಇನ್ನೊಂದು ಮದುವೆಯಾಗಲು ಲೀಲಾವತಿಯನ್ನು ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಮಹಿಳಾ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಕೂಡ ನಡೆಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ