Daily Horoscope
✕

ಬಿಪಿಎಲ್ ಕಾರ್ಡ್ ಅಕ್ರಮವಾಗಿ ಪಡೆದುಕೊಂಡವರಿಗೆ ಶಾಕ್ ಕೊಡಲು ಸಿದ್ಧವಾದ ಸರ್ಕಾರ

Krishnaveni K
ಸೋಮವಾರ, 15 ಸೆಪ್ಟಂಬರ್ 2025 (10:30 IST)
ಬೆಂಗಳೂರು: ಬಿಪಿಎಲ್ ಕಾರ್ಡ್ ಅಕ್ರಮವಾಗಿ ಪಡೆದುಕೊಂಡಿದ್ದರೆ ರಾಜ್ಯ ಸರ್ಕಾರ ಶಾಕ್ ಕೊಡಲು ಮುಂದಾಗಿದೆ. ಈ ಮಾಸಾಂತ್ಯದೊಳಗೆ ಅನರ್ಹ ಬಿಪಿಎಲ್ ಕಾರ್ಡ್ ಗಳಿಗೆ ಕೊಕ್ ನೀಡಲು ಮುಂದಾಗಿದೆ.

ಬಿಪಿಎಲ್ ಕಾರ್ಡ್ ಹೊಂದಲು ಕೇಂದ್ರ ಸರ್ಕಾರ ಕೆಲವು ಮಾನದಂಡ ನೀಡಿದೆ. ಅದರ ಅನ್ವಯ ಇಲ್ಲದ ಕಾರ್ಡ್ ಗಳನ್ನು ರದ್ದುಗೊಳಿಸಲು ರಾಜ್ಯದ ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ ನಿರ್ಧರಿಸಿದೆ.

ಮಾನದಂಡಗಳ ಪ್ರಕಾರ 17. ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಗಳಿವೆ. ಕೆಲವು ಕಡೆ ಒಂದೇ ಕುಟುಂಬದಲ್ಲಿ ಎರಡು ಕಾರ್ಡ್ ಗಳಿರುವ ಉದಾಹರಣೆಗಳಿವೆ. ಈಗ ಅಂತಹ ಕಾರ್ಡ್ ಗಳನ್ನೆಲ್ಲಾ ಪತ್ತೆ ಹಚ್ಚಿ ಡಿಲೀಟ್ ಮಾಡಲು ಸರ್ಕಾರ ಮುಂದಾಗಿದೆ.

ಈ ರೀತಿ ಅನರ್ಹ ಕಾರ್ಡ್ ಗಳನ್ನು ರದ್ದು ಮಾಡುವುದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1500 ಕೋಟಿ ರೂ. ಉಳಿತಾಯವಾಗಲಿದೆ. ಇದರಿಂದ ಈಗಾಗಲೇ ಆರ್ಥಿಕ ಹೊರೆಯಿಂದ ತತ್ತರಿಸಿರುವ ಸರ್ಕಾರಕ್ಕೆ ಕೊಂಚ ಮಟ್ಟಿಗೆ ಹೊರೆ ಕಡಿಮೆಯಾದಂತಾಗುತ್ತದೆ ಎನ್ನುವುದು ಇದರ ಹಿಂದಿನ ಲೆಕ್ಕಾಚಾರವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಮಾತ್ರವಲ್ಲ, ಅವರಪ್ಪನೂ ಹೋಗ್ತಾರೆ: ಮೋದಿ ಎಂದು ಕೂಗಿದ ವ್ಯಕ್ತಿಯ ಮುಂದೆ ಅಬ್ಬರಿಸಿದ ಮಲ್ಲಿಕಾರ್ಜುನ ಖರ್ಗೆ Video

ಕುಟುಂಬದಲ್ಲಿ ಗೃಹಹಿಂಸೆ ಸಹಿಸಬೇಡಿ: ಮಹಿಳೆಯರ ರಕ್ಷಣೆಗಾಗಿ ಇರುವ ಹಕ್ಕುಗಳು ಮತ್ತು ತುರ್ತು ಸಹಾಯವಾಣಿ ಮಾಹಿತಿ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದಿದ್ದರೆ ಈ ಘಟನೆಯನ್ನು ಯಾರೂ ನಂಬುತ್ತಿರಲಿಲ್ಲ video

Karnataka Weather: ನಿಮ್ಮ ಜಿಲ್ಲೆಯಲ್ಲಿ ಮಳೆಯಾಗಲಿದೆಯೇ, ಹವಾಮಾನ ಇಲಾಖೆಯ ಹೊಸ ಮುನ್ಸೂಚನೆ

ಸ್ಟಿಂಗ್ ಅಂತ ಮಂಗ ಮಾಡುವವರು: ಆರ್.ಅಶೋಕ್ ಟೀಕೆ

ಮುಂದಿನ ಸುದ್ದಿ
Show comments