Webdunia - Bharat's app for daily news and videos

Install App

ನಗರದ ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ವಂಚನೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ

Webdunia
ಶನಿವಾರ, 11 ಸೆಪ್ಟಂಬರ್ 2021 (20:33 IST)
ಬೆಂಗಳೂರು: ರಾಜಧಾನಿಯ ತಿಲಕನಗರದ ಸ್ವಾಗತ್ ರಸ್ತೆಯಲ್ಲಿದಲಿರುವ ಇಕ್ರ ವೆಲ್ತ್ ಮ್ಯಾನೇಜ್ಮೆಂಟ್ ಎಂಬ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತಿಲಕ್ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 
 
ನಾಲ್ವರು ಆರೋಪಿಗಳು ಗ್ರಾಹಕರಿಗೆ ಕಡಿಮೆ ಹೂಡಿಕೆ ಹೆಚ್ಚು ಬಡ್ಡಿ, ಲಾಭಾಂಶ ನೀಡುವುದಾಗಿ ಹೇಳಿ ಸುಮಾರು 40 ಜನರಿಗೆ 2 ಕೋಟಿ ರೂ ವಂಚನೆ ಮಾಡಿ ಪರಾರಿಯಾಗಿದ್ದರು.ಈ ಹಿನ್ನಲೆಯಲ್ಲಿ  ಪ್ರಕರಣ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. 
 
ಪ್ರಕರಣದ ಸಂಬಂಧ  ತಿಲಕ್ ನಗರ ಪೊಲೀಸರು ಅಬ್ದುಲ್ ನಜೀಮ್, ಹಿದಾಯತ್ ಉಲ್ಲಾ, ನಜೀಮ್, ಅಲಿಂ ಎಂಬುವವರನ್ನು ಬಂಧಿಸಿ ವಿಚಾರಣೆ ನೆಡೆಸುತ್ತಿದ್ದಾರೆ. ಮುಖ್ಯವಾಗಿ ಆರೋಪಿಗಳು ತಿಲಕ್ ನಗರ ನಿವಾಸಿಯೊಬ್ಬರ ಬಳಿಯಲ್ಲಿ 10 ಲಕ್ಷ ಮತ್ತು   ಸ್ನೇಹಿತರ ಬಳಿ 5 ಲಕ್ಷ ಹಣ ಪಡೆದುಕೊಂಡು ಮೋಸ ಮಾಡಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
 
ಈ ನಾಲ್ವರು ಅರೋಪಿಗಳ ವಿರುದ್ಧ  2019 ಬಡ್ಸ್ ಆಕ್ಟ್ ಸೆಕ್ಷನ್ 21, ಕೆಪಿಐಡಿ ಆಕ್ಟ್ ಸೆಕ್ಷನ್ 9 ಹಾಗೂ ಐಪಿಸಿ 506, 420 ಅಡಿ ಕೇಸ್ ದಾಖಲು ಮಾಡಿಕೊಂಡಿರುವ ಪೊಲೀಸರು ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
bangalore

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ರೀಡಾ ಸಾಮಾಗ್ರಿ ಖರೀದಿಸುವಾಗ ಎಚ್ಚರ ತಪ್ಪಿದ್ರೆ ಆಗುತ್ತೆ ಪಂಗನಾಮ

ಧರ್ಮಸ್ಥಳ ಬುರುಡೆ ರಹಸ್ಯ: ಯಾವಾಗ ಕೈ ಸೇರುತ್ತೆ ಗೊತ್ತಾ ಎಫ್‌ಎಸ್‌ಎಲ್ ವರದಿ

ಮೂಡುಬಿದಿರೆ, ಬಸ್‌ನಲ್ಲಿ ಯುವತಿಯೊಂದಿಗೆ ಅನುಚಿತ ವರ್ತನೆ, ವ್ಯಕ್ತಿ ಅರೆಸ್ಟ್‌

ಧರ್ಮಸ್ಥಳ ಕೇಸ್ ರಹಸ್ಯ ಬಯಲಾಗುತ್ತಿದ್ದಂತೇ ಮಹತ್ವದ ಹೇಳಿಕೆ ಕೊಟ್ಟ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

11ದಿನಗಳಿಂದ ಆಪ್ತ ಸ್ನೇಹಿತೆ ನಾಪತ್ತೆ, ದೂರು ನೀಡಿದಾಗ ಬಯಲಾಯಿತು ಭಯಾನಕ ರಹಸ್ಯ

ಮುಂದಿನ ಸುದ್ದಿ
Show comments