Webdunia - Bharat's app for daily news and videos

Install App

ನನ್ನನ್ನು ಮುಗಿಸಲು ಮುಂದಾದರೆ ರಾಜ್ಯಕ್ಕೆ ಬೆಂಕಿ ಬೀಳುತ್ತದೆ: ಬಸನಗೌಡ ಯತ್ನಾಳ್

Sampriya
ಸೋಮವಾರ, 14 ಏಪ್ರಿಲ್ 2025 (16:04 IST)
Photo Credit X
ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತಿನ ವೇಗದಲ್ಲಿ ತಪ್ಪಾಗಿದೆ ಎಂದರು.

ವಿಜಯಪುರದಲ್ಲಿ ತಮ್ಮ ವಿರುದ್ಧ ನಡೆದ ಸಂಚಿನ ಬಗ್ಗೆ ಪ್ರತಿಕ್ರಿಯಿಸಿದ ಅವರು,  ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತಾಗುತ್ತದೆ. ವಿಜಯಪುರದಲ್ಲಿ ಕಾಂಗ್ರೆಸ್ ಬಿಟ್ಟರೇ ಬೇರೆಯವರು ಮಾತನಾಡಿಲ್ಲ. ಹತಾಶೆಯಾಗಿರುವ ಕಾಂಗ್ರೆಸ್‌ನವರು ಒಂದು ವಿಷಯಕ್ಕಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿತ್ತು. ಅದೆಲ್ಲ ಈಗ ಬಂದ್ ಆಗಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಹೇಳುತ್ತಿದ್ದು, ಕಾಂಗ್ರೆಸ್‌ನವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡುವ ಬಗ್ಗೆ ಕಲಿಸಿಲ್ಲ ಎಂದರು.

ನನ್ನನ್ನು ಮುಗಿಸಲು ನಡೆದ ಸಂಚು ಇದಾಗಿದೆ. ಆ ರೀತಿ ಆದರೆ ರಾಜ್ಯದಲ್ಲಿ ಬೆಂಕಿ ಬೀಳುತ್ತದೆ ಎಂದರು.  ಸದ್ಯ ಪೊಲೀಸ್ ಇಲಾಖೆ ತನಿಖೆ ಮಾಡುತ್ತಿದ್ದು, ಇದರ ಹಿಂದೆ ಯಾರಿದ್ದಾರೆ ಎಂದು ಹೊರಬರುತ್ತದೆ. ಈ ಬಗ್ಗೆ ಎನ್‌ಐಎ  ತನಿಖೆಯಾಗಲಿ. ನನ್ನನ್ನು ಮುಗಿಸೋಕೆ ಆಗಲ್ಲ. ನಮ್ಮಲ್ಲಿ ರಾಣಿಚೆನ್ನಮ್ಮ, ರಾಯಣ್ಣ, ಅಂಬೇಡ್ಕರ್ ರಕ್ತ ಇದೆ. ಹೀಗೆ ಮುಂದುವರೆದರೆ ನಮ್ಮವರು ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಸಿಬಿ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ ದಿವ್ಯಾಂಶಿ ತಾಯಿ ದಿಢೀರ್‌ ಠಾಣೆ ಮೆಟ್ಟಿಲೇರಿದ್ದೇಕೆ

ಸ್ಮಾರ್ಟ್ ಮೀಟರ್ ಹಗರಣದಲ್ಲಿರುವ ಸಚಿವ ಕೆಜೆ ಜಾರ್ಜ್ ವಜಾ ಮಾಡಿ: ಡಾ ಸಿಎನ್ ಅಶ್ವತ್ಥನಾರಾಯಣ

ಯೆಸ್ ಬ್ಯಾಂಕ್‌ಗೆ ₹3,000 ಕೋಟಿ ಸಾಲ ವಂಚನೆ: ಅನಿಲ್‌ ಅಂಬಾನಿಗೆ ಜಾರಿ ನಿರ್ದೇಶನಾಲಯ ಶಾಕ್‌

ರಷ್ಯಾದಲ್ಲಿ ತಾಂತ್ರಿಕ ದೋಷದಿಂದ ಪ್ಯಾಸೇಂಜರ್‌ ವಿಮಾನ ಪತನ: ಆರು ಸಿಬ್ಬಂದಿ ಸೇರಿ 50 ಮಂದಿ ಸಾವು

ಮಹದಾಯಿ ಯೋಜನೆಗೆ ಅನುಮತಿ ನಿರಾಕರಿಸಿ ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments