Select Your Language

Notifications

webdunia
webdunia
webdunia
webdunia

ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ- ಮುತಾಲಿಕ್

ತಾಕತ್ತಿದ್ದರೆ ಆರ್‌ಎಸ್‌ಎಸ್‌, ಶ್ರೀರಾಮಸೇನೆ, ಬಜರಂಗದಳ ನಿಷೇಧಿಸಲಿ- ಮುತಾಲಿಕ್
ಚಿಕ್ಕಮಗಳೂರು , ಶುಕ್ರವಾರ, 12 ಜನವರಿ 2018 (06:56 IST)

ತಾಕತ್ತಿದ್ದರೆ ರಾಜ್ಯ ಸರ್ಕಾರ ಆರ್ಎಸ್ಎಸ್‌, ಶ್ರೀರಾಮಸೇನೆ, ಬಜರಂಗದಳ ಸಂಘಟನೆಗಳನ್ನು ನಿಷೇಧ ಮಾಡಲಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಸವಾಲು ಹಾಕಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶಭಕ್ತಿಯ ಬಜರಂಗದಳ, ಶ್ರೀರಾಮಸೇನೆ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ಪಿಎಫ್ ಜತೆ ನಮ್ಮ ಸಂಘಟನೆಗಳನ್ನು ಹೋಲಿಕೆ ಮಾಡುವುದೇಮೂರ್ಖತನ ಎಂದಿದ್ದಾರೆ.

ಕರ್ನಾಟಕದಲ್ಲಿ ನಡೆದಿರುವ ಸರಣಿ ಕೊಲೆಗಳ ಪೈಕಿ ಏಳು ಪ್ರಕರಣಗಳಲ್ಲಿ ಪಿಎಫ್ಐ ಸಂಘಟನೆ ಹೆಸರಿದ್ದು, ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಬೇಕಾದ ಮುಖ್ಯಮಂತ್ರಿ ಬಿಜೆಪಿ, ಆರ್ಎಸ್ಎಸ್ಉಗ್ರಗಾಮಿಗಳು ಎಂದಿರುವುದು ಬಾಲಿಶತನದ ಹೇಳಿಕೆ ಎಂದು ತಿಳಿಸಿದ್ದಾರೆ.

ಮುಸ್ಲಿಂ ತುಷ್ಟೀಕರಣದಿಂದ ಕಾಂಗ್ರೆಸ್ ಹಿಂದೂಭಯೋತ್ಪಾದನೆ ಎಂಬುದನ್ನು ಹುಟ್ಟು ಹಾಕಿ, ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು, ಮುಸ್ಲಿಂ ಜನಾಂಗದವರ ಓಟಿಗಾಗಿ ಈ ರೀತಿ ಹೇಳುವುದು ನಿಲ್ಲಿಸಿ, ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.


Share this Story:

Follow Webdunia kannada

ಮುಂದಿನ ಸುದ್ದಿ

ಹಿಂದುತ್ವ, ಮನುಷ್ಯತ್ವ ಇಲ್ಲದ ಆರ್‌ಎಸ್‌ಎಸ್‌, ಬಜರಂಗದಳ- ಸಿಎಂ