ಬೆಂಗಳೂರು: ಕನ್ನಡದಲ್ಲಿ ಬ್ಯಾಂಕ್ ವ್ಯವಹಾರವನ್ನು ವಿವರಿಸಿ ಎಂದ ಗ್ರಾಹಕನಿಗೆ ಮಹಿಳಾ ಬ್ಯಾಂಕ್ ಮ್ಯಾನೇಜರ್‌ವೊಬ್ಬರು ದರ್ಪದಿಂದ ಉತ್ತರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಾವುದೇ ಕಾರಣಕ್ಕೂ ಕನ್ನಡ ಮಾತೇ ಆಡಲ್ಲ ಎಂದಿರುವ ಮಹಿಳಾ ಅಧಿಕಾರಿಯ ದರ್ಪದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ವ್ಯಕ್ತವಾಗಿದೆ.
ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಇದು ಭಾರತ ಎಂದು ಬ್ಯಾಂಕ್ ಮ್ಯಾನೇಜರ್ ಉತ್ತರಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಮೊದಲು ಮೊದಲು ಆಮೇಲೆ ಬೇರೆಲ್ಲ ಭಾಷೆ ಎಂದಿದ್ದಕ್ಕೆ ಆಕ್ರೋಶಗೊಂಡ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಿ ಎಂದು ಎದುರು ಉತ್ತರ ನೀಡಿದ್ದಾರೆ.
ಯಾಕೆ ಕನ್ನಡ ಮಾತನಾಡಲ್ಲ ಎಂದಿದ್ದಕ್ಕೆ, ಹಿಂದಿಯಲ್ಲಿ ಮಾತನಾಡಿ ಉತ್ತರಿಸುತ್ತೇನೆ ಎಂದಿದ್ದಾರೆ. ಇದು ಕರ್ನಾಟಕ, ಆರ್ಮಿ ನಿಯಮ ಪ್ರಕಾರ ಕನ್ನಡ ಭಾಷೆಯನ್ನೇ ಮಾತನಾಡಬೇಕೆಂದರು. ಇದಕ್ಕೆ ಮತ್ತೇ ಕೋಪಗೊಂಡ ಮ್ಯಾನೇಜರ್ ಯಾವುದೇ ಕಾರಣಕ್ಖು ಕನ್ನಡ ಮಾತನಾಡಲ್ಲ ಎಂದಿದ್ದಾರೆ.