ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಿನೂತನವಾಗಿ ಧರಣಿ ನಡೆಸಿದ್ದಾರೆ.ಮೊದಲಿನಿಂದಲೂ ಶಾಂತಿಯ ರಾಜ್ಯ ಕರ್ನಾಟಕ.ಇದು ಸರ್ವ ಜನಾಂಗದ ಶಾಂತಿಯ ತೋಟ.ರಾಜ್ಯದಲ್ಲಿ ಶಾಂತಿಯನ್ನ ಕದಡುವ ಚಿಂತನೆಯಾಗುತ್ತಿದೆ.ಸರ್ಕಾರ ಇದನ್ನು ಪ್ರಾಮಾಣಿಕವಾಗಿ, ಗಂಭೀರವಾಗಿ ಪರಿಗಣಿಸಬೇಕು.ರಾಜ್ಯದಲ್ಲಿ ಕನ್ನಡಕ್ಕೆ ಅಪಮಾನವಾದ್ರೆ ನಾವು ಸುಮ್ಮನಿರಲ್ಲ.ಕನ್ನಡಪರ ಹೋರಾಟಗಾರ ಸಭೆ ನಡೆಸುತ್ತೆವೆ ಎಂದು ಕನ್ನಡಪರ ಹೋರಾಟಗಾರ ವಾಟಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ನಾಡಲ್ಲಿ ಸಾವರ್ಕರ್ ಯಾತ್ರೆಗೆ ಯಾವ ಅವಕಾಶವನ್ನು ಕೊಡಬಾರದು.ಮೊಟ್ಟೆ ತಿನ್ನಲು ಮಾತ್ರ ಇರೋದು.ಮೊಟ್ಟೆಯನ್ನು ಎಸೆಯುವುದು ಅಂದ್ರೆ ಏನು?ಮೊಟ್ಟೆ ಹೊಡೆಯುವ ಸಂಸ್ಕೃತಿ ಇಲ್ಲ.ಹಾಗಾಗಿ ಕೋಳಿ ಚಳುವಳಿ ನಡೆಸಲಾಗುತ್ತಿದೆ.ವಿರೋಧ ಪಕ್ಷದ ನಾಯಕರನ್ನು ಗೌರವಾಗಿ ಕಾಣಬೇಕು.ಸಿಎಂ ಬೊಮ್ಮಾಯಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಅಸಾಮಾಧಾನ ಹೊರಹಾಕಿದ್ದಾರೆ.