ಕೋಟ್ಯಾಧೀಶ ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಶ್ವರಿಯನ್ನು ಕೊಲ್ಲುವುದಾಗಿ ಭಾಸ್ಕರ ಶೆಟ್ಟಿ ಹೇಳಿಕೊಂಡಿದ್ದ. ಮಗಳ ಜಾಗದಲ್ಲಿ ನಾನಿದ್ದರೆ ಅದನ್ನೇ ಮಾಡುತ್ತಿದ್ದೆ ಎಂದು ಆರೋಪಿ ರಾಜೇಶ್ವರಿ ತಾಯಿ ಸುಮತಿ ಹೇಳಿಕೊಂಡಿದ್ದಾರೆ.
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯಾಗಿ 20 ದಿನಗಳು ಕಳೆದಿದೆ. ಇಷ್ಟು ದಿನಗಳ ನಂತರ ಪ್ರಕರಣದ ಆರೋಪಿ ರಾಜೇಶ್ವರಿ ಕಡೆಯಿಂದ ಹೇಳಿಕೆಗಳು ಬರುಲು ಶುರುವಾಗಿದ್ದು, ಆರೋಪಿ ತಾಯಿ ಸುಮತಿ ಮಾಧ್ಯಮದ ಮುಂದೆ ಬಂದಿದ್ದಾರೆ.
ನನ್ನ ಮಗಳು ಮುಗ್ಧ ಸ್ವಭಾವದವಳು. ಅಳಿಯ ಭಾಸ್ಕರನ ಅಟ್ಟಹಾಸದಿಂದ ಆಕೆ ಈ ಕೃತ್ಯ ಎಸಗಿರಬಹುದು ಎಂದು ಹೇಳಿದ್ದಾಳೆ. ತನ್ನನ್ನು ಕೊಲ್ಲಲು ಬಂದ ಗಂಡನಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಕೊಲೆ ಮಾಡಿರಬಹುದು. ಮಗಳ ಜಾಗದಲ್ಲಿ ಯಾರೇ ಇದ್ದರೂ ಇದನ್ನೇ ಮಾಡುತ್ತಿದ್ದರು ಎಂದು ಸುಮತಿ ಸ್ಪಷ್ಟನೆ ನೀಡಿದ್ದಾರೆ.
ಭಾಸ್ಕರ ಶೆಟ್ಟಿಗೆ ಸೌದಿಯಲ್ಲಿರುವ ಕಾರ್ಕಳ ಮೂಲದ ನರ್ಸ್ ಜೊತೆ ಸಂಬಂಧ ಇದ್ದು, ಆಕೆಯ ಕೈಗೊಂದು ಮಗುವನ್ನು ಕೊಟ್ಟಿದ್ದಾನೆ. ಆಸ್ತಿ ಹಾಗೂ ವ್ಯವಹಾರಗಳೆಲ್ಲವೂ ಅವಳ ಸಮ್ಮುಖದಲ್ಲೇ ನಡೆಯುತ್ತದೆ. ನರ್ಸ್ ಜೊತೆ ಸಂಬಂಧ ಬೆಳೆದ ನಂತರ ಪತ್ನಿ ರಾಜೇಶ್ವರಿ ಹಾಗೂ ಮಗನ ಪಾಸ್‌ಪೋರ್ಟ್ ರದ್ದು ಮಾಡಿಸಿದ್ದ ಎಂದು ಆರೋಪಿಸಲಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ