ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಸಿಗೋದಾದ್ರೆ ಪಕ್ಷ ಸೇರ್ಪಡೆ ಆಗುತ್ತೇನೆ- ಆಯನೂರು ಮಂಜುನಾಥ್

Webdunia
ಭಾನುವಾರ, 20 ಆಗಸ್ಟ್ 2023 (20:30 IST)
ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಸಿಗೋದಾದ್ರೆ ಆ ಪಕ್ಷ ಸೇರ್ತೀನಿ ಎಂದು ಮಾಜಿ ಸಂಸದ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದ್ದಾರೆ.ಸದಾಶಿವನಗರದಲ್ಲಿ ಡಿಸಿಎಂ ಡಿಕೆಶಿವಕುಮಾರ್ ಭೇಟಿ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ಉದ್ದೇಶದಿಂದ ಭೇಟಿ‌ಮಾಡಿಲ್ಲ. ಬೇರೆ ಕೆಲಸ ಕಾರ್ಯದ ಸಂಬಂಧ ಭೇಟಿ‌ಮಾಡಿದ್ದೆ.ಕೆಲವು ಮನವಿ ಸಲ್ಲಿಸಿದೆ. ಸಹಜವಾಗಿ ರಾಜಕೀಯ ಚರ್ಚೆ ಆಗಿದೆ.ಶಿವಮೊಗ್ಗ ಜಿಲ್ಲೆಯ ರಾಜಕೀಯ ಚರ್ಚೆ ಆಗಿದೆ.ಕೆಲ ಕಾಂಗ್ರೆಸ್ ಸ್ನೇಹಿತರು ಕಾಂಗ್ರೆಸ್ ಸೇರ್ಪಡೆಗೆ ವಿರೋಧ ಮಾಡಿದ್ರು. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಈಗಾಗಲೇ ಕಾಂಗ್ರೆಸ್ಸಿನಿಂದ ಆಹ್ವಾನ ಬಂದಿದೆ. ಕೆಲ ವಿಚಾರ ಇನ್ನೂ ತೀರ್ಮಾನ ಆಗಬೇಕಿದೆ. ಅದೆಲ್ಲ ಖಚಿತವಾದ ಮೇಲೆ ಎಲ್ಲ ಮಾತನಾಡುತ್ತೇನೆ. ಏನು ಚರ್ಚೆ ಮಾಡಿದ್ದೇನೆ ಅಂತ ಈಗ ಹೇಳಲ್ಲ.ಅದೆಲ್ಲ ಖಚಿತವಾದ ಮೇಲೆ ಹೇಳುತ್ತೇನೆ ಎಂದು ಹೇಳಿದರು.
 
ಎನ್ ಪಿಎಸ್,ಓಪಿಎಸ್ ಬಗ್ಗೆ ಚರ್ಚೆ ಮಾಡಿದ್ದೇನೆ.ಅತಿಥಿ ಉಪನ್ಯಾಸಕರ ಬಗ್ಗೆ ಚರ್ಚೆ ಮಾಡಿದ್ದೇನೆ. ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಬೇಕಿತ್ತು.ಕೊನೆ ಕ್ಷಣದಲ್ಲಿ ಸಂಪರ್ಕ ಆಗಲಿಲ್ಲ. ಈಗ ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರುತ್ತಿದ್ದೇನೆ.ಆದ್ರೆ ಸೇರ್ಪಡೆ ಅಂತಿಮಗೊಂಡಿಲ್ಲ.ಲೋಕಸಭಾ ಹಾಗೂ ಪರಿಷತ್ ಚುನಾವಣೆ ಇದ್ದಾವೆ. ವಿಧಾನ ಪರಿಷತ್ ಚುನಾವಣೆ ಟಿಕೆಟ್ ಆಕಾಂಕ್ಷಿ ಇದ್ದೇನೆ. ಆದ್ರೆ ಕಂಡಿಷನ್ ಹಾಕದೆ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ.ಕೆಲ ದಿನಗಳಲ್ಲಿ ಸೇರ್ಪಡೆ ತೀರ್ಮಾನ ಮಾಡುತ್ತೇನೆ ಎಂದರು.
 
ಶಿವಮೊಗ್ಗ ಜಿಲ್ಲೆಯ ಅನ್ಯ ಪಕ್ಷದ ನಾಯಕರ ಸೇರ್ಪಡೆ ಬಗ್ಗೆ ಗೊತ್ತಿಲ್ಲ.ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಗೊತ್ತಿಲ್ಲ. ಶಿವಮೊಗ್ಗ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಆಗಿದೆ. ಬಿಜೆಪಿಯಿಂದ ಸೇರುವಂತೆ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಮಾಧ್ಯಮದಲ್ಲಿ ಆಹ್ವಾನ ಕೊಡುವುದು ಬಿಟ್ಟು ನಾಯಕರ ಸಂಪರ್ಕ ಮಾಡಲಿ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments