Publish Date: Fri, 30 Aug 2019 (14:07 IST)
Updated Date: Fri, 30 Aug 2019 (14:09 IST)
ವಿಜಯಪುರ : ಡಿಕೆ ಶಿವಕುಮಾರ್ ಉಪ್ಪು ತಿಂದಿದ್ದರೆ ನೀರು ಕುಡಿಯುತ್ತಾರೆ ಎಂದು ಸಚಿವ ಬಿ ಶ್ರೀರಾಮಲು ಟಾಂಗ್ ನೀಡಿದ್ದಾರೆ.
ಡಿಕೆ ಶಿವಕುಮಾರಿಗೆ ಇಡಿ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ರಾಜಕಾರಣಿ ಹೊರತಾಗಿ ಒಬ್ಬ ಉದ್ಯಮಿ ಕೂಡ. ಅವರು ಐಟಿ ಅಧಿಕಾರಿಗಳ ದಾಳಿ ವೇಳೆ ಪೇಪರ್ ಹರಿದು ಹಾಕಿರುವ ಘಟನೆ ಎಲ್ಲರಿಗೂ ತಿಳಿದಿದೆ. ಅವರು ಎಲ್ಲೋ ಮಾಡಿದ ತಪ್ಪನ್ನು ರಾಜಕೀಯಕ್ಕೆ ಸಂಬಂಧ ಕಲ್ಪಿಸುತ್ತಿದ್ದಾರೆ. ಅವರ ಮೇಲೆ ಹಗೆತನ ಮಾಡುವ ಅಗತ್ಯ ಇಲ್ಲ. ಈ ಕುರಿತು ತನಿಖೆ ನಡೆಯಲಿ ತಪ್ಪಾಗಿದ್ದರೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಅಲ್ಲದೇ ಕಾನೂನುನಿಂದ ತಪ್ಪಿಸಿಕೊಳ್ಳುತ್ತೇವೆ ಎಂಬುದುದು ಸುಳ್ಳು. ಕಾನೂನು ಮುಂದೆ ಎಲ್ಲರೂ ಒಂದೇ. ಅವರು ಮಾಡಿರುವ ಅಕ್ರಮಗಳನ್ನು ನೋಡಿದ್ದೇವೆ. ಗುಜರಾತ್ ಶಾಸಕರನ್ನು ಕರೆದುಕೊಂಡು ಬಂದು ರೆಸಾರ್ಟ್ನಲ್ಲಿಟ್ಟುಕೊಂಡಿದನ್ನು ನೋಡಿದ್ದೇವೆ. ಭ್ರಷ್ಟಾಚಾರ, ಹವಾಲಾ ದಂಧೆ, ಅನಧಿಕೃತ ಹಣದ ವ್ಯವಹಾರ ಮಾಡಿದವರ ವಿರುದ್ಧ ಈ ಹಿಂದೆಯೂ ಕ್ರಮ ಕೈಗೊಳ್ಳಾಗಿದೆ. ಈಗಲೂ ಕಾನೂನು ಕ್ರಮಕ್ಕೆ ಮುಂದಾಗುತ್ತದೆ ಎಂದು ಅವರು ತಿಳಿಸಿದ್ದಾರೆ.