Select Your Language

Notifications

webdunia
webdunia
webdunia
webdunia

ಲೋನ್ ಕೊಡದೆ ಸತಾಯಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್​ ಗೆ ಗ್ರಾಹಕ ಮಾಡಿದ್ದೇನು ಗೊತ್ತಾ?

ವಿಜಯಪುರ
ವಿಜಯಪುರ , ಭಾನುವಾರ, 25 ಆಗಸ್ಟ್ 2019 (11:31 IST)
ವಿಜಯಪುರ : ಲೋನ್ ಗಾಗಿ ಹಲವು ದಿನಗಳಿಂದ ಅಲೆದಾಡಿ ಸುಸ್ತಾದ ಗ್ರಾಹಕನೊಬ್ಬ ಕೋಪಗೊಂಡು ಬ್ಯಾಂಕ್ ಮ್ಯಾನೇಜರ್ ​ಗೆ ಕಪಾಳಕ್ಕೆ ಬಾರಿಸಿದ ಘಟನೆ ವಿಜಯಪುರದ ಇಂಡಿ ತಾಲೂಕಿನ ಭತಗುಣಕಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ನಡೆದಿದೆ.




ಗ್ರಾಹಕ ಶರಣು ಮಾಮನೆ ಹಲವು ದಿನಗಳಿಂದ ಲೋನ್‍ ಗಾಗಿ ಬ್ಯಾಂಕ್ ಗೆ ಅಲೆದಾಡುತ್ತಿದ್ದರು. ಆದರೆ ಕೆವಿಜಿ ಬ್ಯಾಂಕ್ ಮ್ಯಾನೇಜರ್ ಬಿ.ವಿ. ಕುಲಕರ್ಣಿ ಅವರು ಶರಣುಗೆ ಲೋನ್ ನೀಡದೆ ಸತಾಯಿಸುತ್ತಿದ್ದರು. ಇದರಿಂದ ಕೋಪಗೊಂಡ ಶರಣು ಬ್ಯಾಂಕ್  ಮ್ಯಾನೇಜರ್​ಗೆ ಕಪಾಳಕ್ಕೆ ಬಾರಿಸಿದ್ದಾರೆ.


ಎರಡು ದಿನದ ಹಿಂದೆ ಘಟನೆ ನಡೆದಿದ್ದು, ಬ್ಯಾಂಕಿನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳಿಂದ ತಡವಾಗಿ ಬೆಳಕಿಗೆ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಅರುಣ್ ಜೇಟ್ಲಿ ಅಂತ್ಯಸಂಸ್ಕಾರ;ಪ್ರಧಾನಿ ಮೋದಿ ಬರುವುದು ಅನುಮಾನ