Select Your Language

Notifications

webdunia
webdunia
webdunia
webdunia

ಜೆಡಿಎಸ್ ಪರವಾಗಿ ನಾನು ಇದ್ದೇನೆ...!!!

ಜೆಡಿಎಸ್ ಪರವಾಗಿ ನಾನು ಇದ್ದೇನೆ...!!!
ಬೆಂಗಳೂರು , ಗುರುವಾರ, 4 ನವೆಂಬರ್ 2021 (17:20 IST)
ದೀಪಾವಳಿ ಹಿನ್ನೆಲೆ ರಾಜ್ಯ ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ಈ ಪೂಜೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಕೂಡ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಹೆಚ್​ಡಿ ದೇವೇಗೌಡ ಸುದ್ದಿಗೋಷ್ಟಿ ನಡೆಸಿದರು.ಪ್ರಧಾನಿ ಹೆಚ್.​ಡಿ.ಡಿ 2023 ಕ್ಕೆ ಚುನಾವಣೆಗೆ ನಾನು ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ ಎಂದರು. ಅಲ್ಲದೆ ಪಕ್ಷದ ಉಳಿದ ನಾಯಕರಿಗೂ ಆಕ್ಟೀವ್ ಆಗಿ ಕೆಲಸ ಮಾಡಬೇಕು ಎಂದು ಆದೇಶಿಸಿದ್ದಾರಂತೆ. ಅಕ್ಟೋಬರ್ 8 ರಿಂದ ಎರಡನೇ ಹಂತದ ಕಾರ್ಯಗಾರ ನಡೆಯಲಿದ್ದು , ಅಲ್ಲಿಂದ ಕಾರ್ಯಕ್ರಮ ಹಾಗೆಯೇ ಮುಂದುವರೆಯಲಿದೆ ಎಂದರು. ಉಪ ಚುನಾವಣೆಯ ಫಲಿತಾಂಶವನ್ನ ಸ್ವೀಕಾರ ಮಾಡ್ತೀವಿ ಅಂದ ದೊಡ್ಡ ಗೌಡ್ರು, ಜನರ ತೀರ್ಮಾನದಂತೆ ಹೋಗ್ತೀವಿ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹಣದಿಂದ ಬಲಿಷ್ಟವಾಗಿವೆ. ಪಕ್ಷ ಕಟ್ಟೋದಕ್ಕೆ ಆರ್ಥಿಕ ಶಕ್ತಿ ಮುಖ್ಯವಾಗಿದ್ದು. ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಎಲ್ಲ ನಾಯಕರು ಜವಾಬ್ದಾರಿಯನ್ನ ಹೊರಬೇಕು ಎಂದು ದೇವೇಗೌಡರು ತಿಳಿಸಿದರು..

Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳು ದಯವಿಟ್ಟು ಆತ್ಮಹತ್ಯೆ ಮಾಡಿಕೊಳಬೇಡಿ