Publish Date: Thu, 08 Mar 2018 (10:53 IST)
Updated Date: Thu, 08 Mar 2018 (10:55 IST)
ಕಲಬುರಗಿ : ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಗೃಹ ಸಚಿವ ರಾಮಲಿಂಗರೆಡ್ಡಿ ಅವರು ಹೇಳಿದ್ದಾರೆ.
‘ಮೆಟಲ್ ಡಿಟೆಕ್ಟರ್ ದೋಷದಿಂದ ಚಾಕು ಪತ್ತೆಯಾಗಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇನ್ನು ಮುಂದೆ ಪಾರ್ಲಿಮೆಂಟ್ ಮಾದರಿಯಲ್ಲಿ ಭದ್ರತೆಗೆ ಕ್ರಮವನ್ನುನೀಡಲಾಗುವುದು. ಬಿಜೆಪಿ ಆಡಳಿತದಲ್ಲಿ ಏನೇನಾಗಿದೆ ಅಂತ ಎಲ್ಲರಿಗೂ ತಿಳಿದಿದೆ. ಲೋಕಾಯುಕ್ತರೊಂದಿಗೆ ಈತ ಮೊದಲೂ ಜಗಳ ಮಾಡಿದ್ದ. ಲೋಕಾಯುಕ್ತರ ಒಳ್ಳೆತನವನ್ನು ಆತ ದುರುಪಯೋಗ ಮಾಡಿಕೊಂಡಿದ್ದಾನೆ’ ಎಂದು ಕಲಬುರಗಿಯಲ್ಲಿ ಗೃಹ ಸಚಿವ ರಾಮಲಿಂಗರೆಡ್ಡಿ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ