Publish Date: Tue, 09 Jan 2018 (13:22 IST)
Updated Date: Tue, 09 Jan 2018 (13:24 IST)
ನಾನು ಕಿಂಗ್‌ಮೇಕರ್ ಆಗಲು ಬಯಸುವುದಿಲ್ಲ. ಕಿಂಗ್ ಆಗಲು ಬಯಸುತ್ತೇನೆ ಎಂದು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಆಹ್ವಾನದ ಮೇರೆಗೆ ಕುಮಾರಸ್ವಾಮಿ ನಿವಾಸಕ್ಕೆ ಬೆಳಗಿನ ಉಪಹಾರಕ್ಕಾಗಿ ಆಗಮಿಸಿದ್ದ ಬ್ರಿಟನ್‌ನ ಭಾರತದ ರಾಯಭಾರಿ ಅಲೆಕ್ಸಾಂಡರ್ ಇವಾನ್ಸ್, ಒಂದು ವೇಳೆ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದರೆ ಏನು ಮಾಡುತ್ತೀರಿ ಎಂದು ಕೇಳಿದಾಗ ಕುಮಾರಸ್ವಾಮಿ, ನಾನು ಕಿಂಗ್ ಮೇಕರ್ ಆಗಲ್ಲ. ಕಿಂಗ್ ಆಗಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯಲಿದೆ. ರಾಜ್ಯದ ರೈತರು ಜೆಡಿಎಸ್ ಪಕ್ಷದೊಂದಿಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬ್ರಿಟನ್ ರಾಯಭಾರಿ ಇವಾನ್ಸ್ ಅವರೊಂದಿಗೆ ಬೆಂಗಳೂರಿನಲ್ಲಿರುವ ಉಪರಾಯಭಾರಿ ಮ್ಯಾಕ್ ಅಲೆಸ್ಟರ್ ಮತ್ತು ಬ್ರಿಟನ್ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ಅಲೆಕ್ಸ್ ಕ್ಯಾಮರೂನ್ ಕೂಡಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.