Select Your Language

Notifications

webdunia
webdunia
webdunia
webdunia

ಡಾ. ಜಿ ಪರಮೇಶ್ವರ್ ಅವರ ಅಣ್ಣನ ಮಗನನ್ನು ವಿಚಾರಣೆಗೆ ಒಳಪಡಿಸಲಿರುವ ಐಟಿ

ಡಾ. ಜಿ ಪರಮೇಶ್ವರ್ ಅವರ  ಅಣ್ಣನ ಮಗನನ್ನು ವಿಚಾರಣೆಗೆ ಒಳಪಡಿಸಲಿರುವ ಐಟಿ
ಬೆಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (12:07 IST)
ಬೆಂಗಳೂರು : ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಅವರ  ನಿವಾಸ ಹಾಗೂ ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೂಡ ಐಟಿ ದಾಳಿ ಮುಂದುವರಿದಿದ್ದು, ಇಂದು ಪರಮೇಶ್ವರ್ ಅವರ  ಸಹೋದರನ ಮಗ  ಆನಂದ್‌ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನೆ ಮಾಡಲಿದ್ದಾರೆ ಎನ್ನಲಾಗಿದೆ.




ಹೌದು. ಜಿ ಪರಮೇಶ್ವರ್ ಅವರ ನಿವಾಸ ಮೇಲಿನ ದಾಳಿಯ ವೇಳೆ ಡಾ.ಜಿ ಪರಮೇಶ್ವರ್‌ ಅವರಿಗೆ ಅವರ ಅಣ್ಣನ ಮಗ ಆನಂದ್‌ ಅವರು ಬರೆದಿದ್ದಾರೆ ಎನ್ನಲಾಗಿರುವ ಡೈರಿಯೊಂದು ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆಯ ಬಗ್ಗೆ ಹಾಗೂ ಯಾರಿಂದ ಎಷ್ಷು ಹಣ ಬಂದಿದೆ. ಎಷ್ಟು ಹಣ ಬರಬೇಕಾಗಿದೆ ಅನ್ನೊಂದನ್ನು ಆನಂದ್ ಬರೆದುಕೊಂಡಿದ್ದಾರೆ.


ಹಾಗೇ  ಆನಂದ ನೀಟ್ ಕಣ್ಣು ತಪ್ಪಿಸಿ ಅಕ್ರಮವಾಗಿ ಮೆಡಿಕಲ್ ಸೀಟ್ ಹಂಚಿಕೆ ಮಾಡ್ತಿದ್ದ ಆರೋಪ ಇತ್ತು. ಅಲ್ಲದೇ ಆನಂದ್ 56 ಸಿನಿಮಾದಲ್ಲೂ ಹೀರೋ ಆಗಿ ನಟಿಸಿದ್ದು, ಹಣವನ್ನು ಸಿನಿಮಾಕ್ಕೆ ಹೂಡಿಕೆ ಮಾಡಿರುವ ಅನುಮಾನದ ಹಿನ್ನಲೆಯಲ್ಲಿ ಇಂದು ಅವರನ್ನು  ಐಟಿ ಅಧಿಕಾರಿಗಳು ವಿಚಾರಣೆ ಮಾಡಲಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನದಲ್ಲಿ ಸುದ್ದಿ ಮಾಧ್ಯಮಗಳ ಕ್ಯಾಮೆರಾ ನಿಷೇಧ; ಪ್ರೆಸ್ ಕ್ಲಬ್ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ