Select Your Language

Notifications

webdunia
webdunia
webdunia
webdunia

ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ : ಸುಮಲತಾ

ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ : ಸುಮಲತಾ
ಮಂಡ್ಯ , ಶನಿವಾರ, 7 ಜನವರಿ 2023 (13:50 IST)
ಮಂಡ್ಯ : ನಾನು ಬಿಜೆಪಿ ಸೇರ್ಪಡೆಯ ಬಗ್ಗೆ ಯೋಚನೆ ಮಾಡಿಲ್ಲ. ಬಿಜೆಪಿ ನಾಯಕರು ಸಹ ಈ ಬಗ್ಗೆ ಮಾತನಾಡಿದ್ದಾರೆ ನಾನು ಈ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ನಾನು ಬಿಜೆಪಿ ಸೇರ್ಪಡೆ ವಿಚಾರ ಇಲ್ಲ. ಫ್ಲೆಕ್ಸ್ ನಲ್ಲಿ ಅವರವರ ಅಭಿಮಾನಕ್ಕೆ ಫೋಟೋ ಹಾಕಿದ್ದಾರೆ ಅಷ್ಟೇ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.

ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎನ್ನುವುದು ಸೀಕ್ರೆಟ್ ಇಲ್ಲ ಸಚ್ಚಿದಾನಂದಗೆ ನನ್ನ ಬೆಂಬಲ ಇದೆ ಎಂದು ಓಪನ್ ಆಗಿ ಘೋಷಣೆ ಮಾಡಿದ್ದೇನೆ. ಹೀಗಾಗಿ ಸಚ್ಚಿ ಬ್ಯಾನರ್ ನಲ್ಲಿ ನನ್ನ ಫೋಟೋ ಹಾಕಿಕೊಂಡಿದ್ದಾರೆ ಅದಕ್ಕೆ ಬೇರೆ ಬೇರೆ ಅರ್ಥ ಕಲ್ಪಿಸಿಕೊಂಡರೆ ನಾನು ಏನು ಮಾಡೋಕೆ ಆಗಲ್ಲ ಎಂದರು. 

ಪಕ್ಷ ಸೇರ್ಪಡೆಯ ಬಗ್ಗೆ ನಾನು ಯಾವುದೇ ಸಭೆ ಮಾಡುತ್ತಿಲ್ಲ, ನಾನು ಹೋದ ಕಡೆ ಜನರನ್ನು ಪಕ್ಷ ಸೇರ್ಪಡೆ ಬಗ್ಗೆ ಕೇಳ್ತಾ ಇದ್ದೀನಿ. ಜನರು ಸಹ ಈ ಬಗ್ಗೆ ಕೇಳ್ತಾ ಇದ್ದಾರೆ. ಜನರು ಸಹ ಸದ್ಯಕ್ಕೆ ಹೀಗೆ ಇರಿ ಎಂದು ಹೇಳುತ್ತಾ ಇದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಮಾಡಿದ ಸಾಲ ತೀರಿಸಿಲ್ಲವೆಂದು ಮಗನನ್ನು ಮರಕ್ಕೆ ಕಟ್ಟಿ ಥಳಿತ!