ಪೆನ್‌ಡ್ರೈವ್‌ ಹಂಚಿಕೆ ವಿಚಾರದಲ್ಲಿ ನನ್ನ ಪಾತ್ರವಿಲ್ಲ: ಶಿವರಾಮೇಗೌಡ ಸ್ಪಷ್ಟನೆ

Sampriya
ಭಾನುವಾರ, 19 ಮೇ 2024 (14:55 IST)
Photo Courtesy X
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾಗಿರುವ ಪೆನ್​​ಡ್ರೈವ್​​​ ಹೊರಗಿಟ್ಟಿದ್ದು ದೇವರಾಜೇಗೌಡ ಮತ್ತು ಕಾರ್ತಿಕ್. ಹೀಗಾಗಿ ಈ ಇಬ್ಬರನ್ನೂ ​ವಿಚಾರಣೆ ನಡೆಸಬೇಕು. ಈ ಪ್ರಕರಣಕ್ಕೂ ಡಿ.ಕೆ. ಶಿವಕುಮಾರ್​ ಅವರಿಗಾಗಲಿ ಮತ್ತು ನನಗಾಗಲಿ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟಪಡಿಸಿದರು.

 ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಯಾವುದೋ ವಿಚಾರದಲ್ಲಿ ನನ್ನ ಹೆಸರು ಹೇಳಿದ್ದಾರೆ. ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ ಮಾಡಲಾಗಿದೆ. ಪ್ರಕರಣದ ತನಿಖೆ ಬೇರೆ ಬೇರೆ ದಿಕ್ಕು ಪಡೆಯುತ್ತಿದೆ. ಪ್ರಕರಣ ಎಲ್ಲೆಲ್ಲೋ ಹೋಗುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೇವರಾಜೇಗೌಡ ಅವರನ್ನು ತಮ್ಮ ಬಳಿ ಕರೆದುಕೊಂಡು ಬನ್ನಿ ಎಂದು ಹೇಳಿರಲಿಲ್ಲ ಎಂದು ಅವರು ಹೇಳಿದರು.

ನಾಲ್ಕು ಮಂತ್ರಿಗಳ ಕಮಿಟಿ ಮಾಡಿ, ಪೆನ್‌ಡ್ರೈವ್‌ ರೆಡಿ ಮಾಡಿದ್ದೇ ಡಿ.ಕೆ.ಶಿವಕುಮಾರ್‌. ಮೋದಿ, ಬಿಜೆಪಿ, ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ನನಗೆ  ಶಿವರಾಮೇಗೌಡ ಮೂಲಕ ನನಗೆ 100 ಕೋಟಿ ರೂಪಾಯಿ ಆಫರ್ ಮಾಡಿದ್ದರು. ಡಿ.ಕೆ. ಶಿವಕುಮಾರ್ ನೇರವಾಗಿ ನನ್ನ ಜೊತೆಗೆ ಮಾತನಾಡಿಲ್ಲ ಎಂದು ವಕೀಲ ದೇವರಾಜೇಗೌಡ ಗಂಭೀರ ಆರೋಪ ಮಾಡಿದ್ದರು.

ದೇವರಾಜೇಗೌಡ ಆರೋಪಕ್ಕೆ ಶಿವರಾಮೇಗೌಡ ಸುದ್ದಿಗೋಷ್ಠಿ ನಡೆಸಿ, ದೇವರಾಜೇಗೌಡ ಜೊತೆ ವ್ಯವಹರಿಸುವಾಗ ಎಚ್ಚರ. ಆತ ನಾಲಾಯಕ್ ವ್ಯಕ್ತಿ, ಒಬ್ಬ ಫ್ರಾಡ್. ಪೆನ್​​ಡ್ರೈವ್​ ವ್ಯಾಪಾರಕ್ಕಿಟ್ಟವನೇ ಈ ದೇವರಾಜೇಗೌಡ. ನನಗೂ ಈ ದೇವರಾಜೇಗೌಡಗೂ ಸಂಬಂಧ ಇಲ್ಲ. ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ತನಿಖೆಯಾಗಲಿ ಎಂದರು.

ದೇವರಾಜೇಗೌಡ ನನಗೆ ಫೋನ್ ಮಾಡಿ, ಡಿಕೆ ಶಿವಕುಮಾರ್​ ಅವರನ್ನು ಭೇಟಿ ಮಾಡಿಸುವಂತೆ ಹೇಳಿದ್ದ. ನಾನು ಆಗಲಿ ಎಂದು ಫೋನ್​ನಲ್ಲಿ ಹೇಳಿದ್ದೆ. ಈ ಮಾತನ್ನೇ ಇಟ್ಟುಕೊಂಡು ದೇವರಾಜೇಗೌಡ ಸುಳ್ಳು ಮಾಹಿತಿ ನೀಡಿದ್ದಾನೆ. ದೇವರಾಜೇಗೌಡ ಏ.29ರಂದು ಬೆಂಗಳೂರಿನ ಎಂ.ಜಿ.ರಸ್ತೆಯ ಬೌರಿಂಗ್​ ಕ್ಲಬ್​ನಲ್ಲಿ ನಮ್ಮನ್ನು ಭೇಟಿ ಮಾಡಿದ್ದ ಎಂದು ತಿಳಿಸಿದರು.

ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ. ಮುಂದೆ ಯಾವ ಪಕ್ಷಕ್ಕೆ ಸೇರುತ್ತೇನೆ ಅಂತ ಹೇಳುತ್ತೇನೆ. ಅಧಿಕಾರ ಕೊಡುತ್ತಾರೆ ಅಂತ ಜೆಡಿಎಸ್​ಗೆ ಸೇರಿದೆ. ಆಮೇಲೆ ರುಬ್ಬಿ ಹೊರಗಡೆಯೂ ಕಳುಹಿಸಿದ್ದಾರೆ. 25 ವರ್ಷ ಆಯ್ತು ಶಾಸಕ ಗಿರಿ ಹೋಗಿ. ನಾನು ಮೂಲತಃ ಕಾಂಗ್ರೆಸ್ ವ್ಯಕ್ತಿ. ಯೂಥ್ ಕಾಂಗ್ರೆಸ್​ನಲ್ಲೂ ಇದ್ದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಸದ್ಯದಲ್ಲೇ ನನ್ನ ನಿರ್ಣಯ ತಿಳಿಸುತ್ತೇನೆ ಎಂದು ತಿಳಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಜನೌಷಧಿ ಕೇಂದ್ರಗಳಿದ್ದರೆ ನಿಮಗೇನು ಸಮಸ್ಯೆ: ರಾಜ್ಯ ಸರ್ಕಾರಕ್ಕೆ ಕೋರ್ಟ್ ತರಾಟೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸದನದಲ್ಲೇ ನಿದ್ದೆ ಹೋದ ಡಿಕೆ ಶಿವಕುಮಾರ್: ರಾತ್ರಿಯೆಲ್ಲಾ ನಿದ್ರೆಯಿಲ್ವಾ ಎಂದು ಕಾಲೆಳದ ಆರ್ ಅಶೋಕ್

ಹೆಚ್ಚು ವೋಟ್ ಪಡೆದಿದ್ದು ಸರ್ದಾರ್ ವಲ್ಲಭಾಯಿ ಪಟೇಲ್, ಆದ್ರೆ ನೆಹರೂ ಹೇಗೆ ಪ್ರಧಾನಿಯಾದ್ರು

ಮುಂದಿನ ಸುದ್ದಿ
Show comments