Publish Date: Sat, 07 Dec 2019 (11:26 IST)
Updated Date: Sat, 07 Dec 2019 (11:29 IST)
ಬೆಂಗಳೂರು: ನಾನು ಉಪಚುನಾವಣೆಯ ಮಾಸ್ಟರ್ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಇಂದು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ವಿ.ಸೋಮಣ್ಣ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನ ಸೋಲು ಗೆಲುವಿಗಿಂತ ಸ್ಥಿರತೆ , ಅಸ್ಥಿರತೆ ಬಗ್ಗೆ ಯೋಚಿಸಿದ್ದಾರೆ. ಬಿಜೆಪಿ ಸರ್ಕಾರವನ್ನು ಮುಂದುವರಿಸುವುದೇ ಜನರ ಉದ್ದೇಶ ಎಂದು ಹೇಳಿದ್ದಾರೆ.
ಹಾಗೇ ಉಪಚುನಾವಣೆಯಲ್ಲಿ ಬಿಜೆಪಿ 12 ರಂದ 13 ಸ್ಥಾನ ಗೆಲ್ಲುತ್ತದೆ. ಸೋತವರಿಗೆ ಸಚಿವ ಸ್ಥಾನದ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ, ಆದ್ರೆ ಸಿಎಂ ಬಿಎಸ್ ವೈ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ.