Select Your Language

Notifications

webdunia
webdunia
webdunia
webdunia

ನನಗೆ ನಾನೇ ಹೈಕಮಾಂಡ್‌ , ನನಗೆ ಯಾವುದೇ ಪಕ್ಷವಿಲ್ಲ: ಯುಟಿ ಖಾದರ್‌

Speaker UT Khadar
ಮಂಗಳೂರು: ವಿಧಾನಸಭಾಧ್ಯಕ್ಷರಿಗೆ ಯಾವ ಹೈಕಮಾಂಡ್‌ ಕೂಡಾ ಇಲ್ಲ. ನನಗೆ ನಾನೇ ಹೈಕಮಾಂಡ್‌ ಆಗಿರುವುದರಿಂದ ಸದ್ಯಕ್ಕೆ ನನಗೆ ಯಾವುದೇ ಪಕ್ಷ  ಎಲ್ಲ ಎಂದು ವಿಧಾನ ಸಭಾಧ್ಯಕ್ಷ ಯುಟಿ ಖಾದರ್ ಮಂಗಳವಾರ ಹೇಳಿದರು. 

ಸಚಿವ ಸ್ಥಾನ ಗಿಟ್ಟಿಸಲು ಪಕ್ಷದ ಹೈಕಮಾಂಡ್‌ ಭೇಟಿಯಾಗಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಈ ಹಿಂದೆ ಸರ್ಕಾರ ರಚನೆಯಾಗುವಾಗಲೂ ಸಚಿವ ಸ್ಥಾನಕ್ಕೆ ನನ್ನ ಹೆಸರು ಮುಂಚೂಣಿಯಲ್ಲಿತ್ತು. ಆದರೆ, ನಾನು ವಿಧಾನಸಭಾಧ್ಯಕ್ಷನಾದೆ. ಈಗಲೂ ಅದೇ ಹುದ್ದೆಯಲ್ಲಿರುವುದಿರಂದ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಸದ್ಯಕ್ಕೆ ಪಕ್ಷದ ವಿಚಾರವೇ ನನ್ನ ತಲೆಯಲ್ಲಿ ಇಲ್ಲ. ಆ ಬಗ್ಗೆ ಆಲೋಚನೆ ಮಾಡಲು ಹೋಗುವುದಿಲ್ಲ ಎಂದು ಹೇಳಿದರು.

ಇನ್ನೂ ಸ್ಪೀಕರ್ ಆಗಿರುವ ಕಾರಣ ಸಿಎಂ ಅವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರುತ್ತೇನೆ. ಒಂದು ವೇಳೆ ಮಂತ್ರಿಯಾದರೂ ವೇದಿಕೆ ಏರಬಹುದು. ಕೇವಲ ಶಾಸಕನಾದರೆ ವೇದಿಕೆ ಮುಂದುಗಡೆ ಕುಳಿತುಕೊಳ್ಳಬೇಕು ಅಷ್ಟೆ. ಸಚಿವನಾಗುತ್ತೇನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪ್ರಮೇಯ ಎದುರಾದರೆ, ಉಪಸಭಾಧ್ಯಕ್ಷರಿಗೆ ಅಥವಾ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಅವರಿಗೆ ಸಲ್ಲಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು. 

ಸಚಿವ ಸ್ಥಾನದ ವಿಚಾರದಲ್ಲಿ ಜಮೀರ್ ಅಹಮದ್‌ ಖಾನ್‌ಗೂ ನನಗೂ ಯಾವುದೇ ಪೈಪೋಟಿ ಇಲ್ಲ. ನಾವಿಬ್ಬರೂ ಪರಸ್ಪರ ಚೆನ್ನಾಗಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಿರುಚೆಂಗೋಡು ರಥೋತ್ಸವದಲ್ಲಿ ದೇವರ ತೇರಿಗೆ ಸಿಕ್ಕು ಪ್ರಾಣ ಕಳೆದುಕೊಂಡ ವ್ಯಕ್ತಿ: ಭೀಕರ ವಿಡಿಯೋ ಇಲ್ಲಿದೆ Video