Publish Date: Wed, 06 May 2026 (18:41 IST)
Updated Date: Wed, 06 May 2026 (18:46 IST)
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ನೂತನ ಶಾಸಕರಾಗಿ ಡಿ.ಎನ್.ಜೀವರಾಜ್ ಅವರು ಪ್ರಮಾಣವಚನ ಸ್ವೀಕರಿಸಿದರು.
ಸ್ಪೀಕರ್ ಯು.ಟಿ.ಖಾದರ್ ಅವರು ಜೀವರಾಜ್‌ಗೆ ಪ್ರಮಾಣವಚನ ಬೋಧಿಸಿದರು. ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಮುನಿರಾಜು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇನ್ನೂ ಜೀವಾಜ್ ಅವರು ಶೃಂಗೇರಿ ಶಾರದಾಂಬೆ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ನೂತನ ಬಿಜೆಪಿ ಶಾಸಕನಿಗೆ ಬೊಕ್ಕೆ, ವಿಧಾನಸಭೆ ನಡಾವಳಿಗಳ ಪುಸ್ತಕ ನೀಡಿದ ಸ್ಪೀಕರ್ ಖಾದರ್ ನೀಡಿ ಅಭಿನಂದಿಸಿದರು. ಆರ್.ಅಶೋಕ್ ಅವರು ಹಾರ, ಪೇಟೆ ಹಾಕಿ ಶಾಸಕರನ್ನು ಸನ್ಮಾನಿಸಿದರು.