ನಾನು ಮೊದಲು ಕನ್ನಡಿಗ, ನಂತರ ಭಾರತೀಯ: ಸಿಎಂ ಸಿದ್ದರಾಮಯ್ಯ

ಬುಧವಾರ, 1 ನವೆಂಬರ್ 2017 (10:42 IST)
ಬೆಂಗಳೂರು: 62 ನೇ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ನನಗೆ ಕನ್ನಡಿಗ ಎನ್ನುಲು ಹೆಮ್ಮೆ. ಮೊದಲು ನಾನು ಕನ್ನಡಿಗ ನಂತರ ಭಾರತೀಯ ಎಂದಿದ್ದಾರೆ.

 
ಬೇರೆ ಭಾಷೆ ಕಲಿಯಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ಕನ್ನಡಿಗನಾಗಿ ಕನ್ನಡ ಕಲಿಯದೇ, ಭಾಷೆ ಬಳಸದೇ ಇದ್ದರೆ ಅವಮಾನ. ಕನ್ನಡೇತರರಿಗೂ ಕನ್ನಡ ಕಲಿಸುವ ವಾತಾವರಣವನ್ನು ನಾವು ನಿರ್ಮಿಸಬೇಕಿದೆ ಎಂದು ಸಿಎಂ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕನ್ನಡ ಕಲಿಕೆ ಸುಲಭ ಮಾಡಲು ಕನ್ನಡ ಸೌರಭ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳ ಹಾಡು, ಪೆರೇಡ್ ಗಮನ ಸೆಳೆಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ರಾಷ್ಟ್ರಗೀತೆ ಹಾಡಲಾಗದಿದ್ದರೆ, ಪಾಕಿಸ್ತಾನಕ್ಕೆ ಹೋಗಿ’