Publish Date: Wed, 06 Sep 2023 (21:00 IST)
Updated Date: Wed, 06 Sep 2023 (20:45 IST)
ದೇಶದ ಹೆಸರು ಬದಲಿಸುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು,ಹೆಸರು ಬದಲಾವಣೆ ಮಾಡೋದು ಅಲ್ಲ.ಬದುಕಿನಲ್ಲಿ ಏನಾದ್ರು ಬದಲಾವಣೆ ಆಗಬೇಕು.ಆದಾಯ ಡಬಲ್ ಮಾಡ್ತೀನಿ ಅಂದ್ರು ಅದು ಆಯ್ತಾ?ಬೆಲೆ ಏರಿಕೆ ನಿಂತಿದ್ಯಾ?ಹೆಸರು ಬದಲಾವಣೆಯಿಂದ ಏನು ಪ್ರಯೋಜನವಿಲ್ಲ.ಜನರಿಗೆ ಅನುಕೂಲ ಆಗುವ ಕಾನೂನು ಮಾಡಲಿ.ಆರ್ ಟಿ ಐ, ಉಳುವನಿಗೆ ಭೂಮಿ ರೀತಿ ಕಾನೂನು ಮಾಡಲಿ.ಆಗ ನಾವು ಅವರನ್ನ ಒಪ್ಪುತ್ತೇವೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ.ಹಿಂದು ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ ಎಂಬ ಪರಂ ಹೇಳಿಕೆ ವಿಚಾರಕ್ಕೆ ನಾನು ಒಬ್ಬ ಹೆಮ್ಮೆಯ ಭಾರತೀಯ ಹಿಂದು ಎಂದು ಡಿ.ಕೆ. ಶಿವಕುಮಾರ್ ಹೊರಟರು.