ದೇಶದ 8 ರಾಷ್ಟ್ರೀಯ ಪಕ್ಷಗಳು 2021-22ರಲ್ಲಿ ಘೋಷಿಸಿದ ಒಟ್ಟು ಆಸ್ತಿ ಮೊತ್ತ 8,829.16 ಕೋಟಿ ರು.ಗಳಾಗಿದೆ. ಅವುಗಳ ಆಸ್ತಿ ಮೌಲ್ಯ ಒಂದೇ ವರ್ಷದಲ್ಲಿ 1532 ಕೋಟಿ ರು.ನಷ್ಟುಹೆಚ್ಚಳವಾಗಿದೆ. ಈ ಪಕ್ಷಗಳು 2020-21ರಲ್ಲಿ 7,297.62 ಕೋಟಿ ರು.ಗಳಷ್ಟುಆಸ್ತಿ ಹೊಂದಿದ್ದವು ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಎಡಿಆರ್ ತನ್ನ ವರದಿಯಲ್ಲಿ ತಿಳಿಸಿದೆ.ಬಿಜೆಪಿ, ಕಾಂಗ್ರೆಸ್,NCP, BSP,CPI , CPM, TMC ಮತ್ತು NPEP ಘೋಷಿಸಿದ ಆಸ್ತಿ ಮತ್ತು ಸಾಲಗಳನ್ನು ವಿಶ್ಲೇಷಿಸಿ ಈ ವರದಿ ಸಿದ್ಧಪಡಿಸಲಾಗಿದೆ.ಬಿಜೆಪಿಯು 6,046.81 ಕೋಟಿ ರು.ಗೆ ಹೆಚ್ಚಾಗಿದೆ.ಕಾಂಗ್ರೆಸ್ನಲ್ಲಿ 805.68 ಕೋಟಿ ರು. ಆಗಿದೆ.ಟಿಎಂಸಿಯ 458.10 ಕೋಟಿ ರು.ಗೆ ಏರಿಕೆಯಾಗಿದ್ದು, ಬಿಎಸ್ಪಿ ತನ್ನ ವಾರ್ಷಿಕ ಘೋಷಿತ ಆಸ್ತಿಯಲ್ಲಿ ಇಳಿಕೆಯನ್ನು ತೋರಿಸಿರುವ ಏಕೈಕ ರಾಷ್ಟ್ರೀಯ ಪಕ್ಷವಾಗಿದೆ ಎಂದು ಎಡಿಆರ್ ವರದಿ ಹೇಳಿದೆ.