Select Your Language

Notifications

webdunia
webdunia
webdunia
webdunia

ಆಸ್ತಿಗಾಗಿ ಕಂದಮ್ಮನಿಗೆ ವಿಷವುಣಿಸಿದ ಮಲತಾಯ

ಆಸ್ತಿ
ಯಾದಗಿರಿ , ಶನಿವಾರ, 2 ಸೆಪ್ಟಂಬರ್ 2023 (19:03 IST)
ಯಾದಗಿರಿ ಜಿಲ್ಲೆಯ ಬಬಲಾದ ಗ್ರಾಮದಲ್ಲಿ ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದಿದ್ದಾಳೆ.. ಶ್ರೀದೇವಿ ಚೆಟ್ಟಿಗೇರಿ ತನ್ನ ಮಗಳು ಸಂಗೀತಾಗೆ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ಮಲತಾಯಿ ದೇವಮ್ಮ ಚೆಟ್ಟಿಗೇರಿ ನಾನು ಹಾಲು ಕುಡಿಸುವೆನೆಂದು ಮಗುವನ್ನು ಕರೆದೊಯ್ದಿದ್ದಾಳೆ. ಮಗುವನ್ನು ರೂಮಿಗೆ ಕರೆದೊಯ್ದು ಬಾಗಿಲು ಮುಚ್ಚಿದ್ದಾಳೆ. ಬಳಿಕ ಮಗುವಿಗೆ ಕುಡಿಸುತ್ತಿದ್ದ ಹಾಲಿನ ಬಾಟಲಿನಲ್ಲಿ ವಿಷ ಬೆರೆಸಿ ಕುಡಿಸಿದ್ದಾಳೆ. ವಿಷ ಬೆರೆತ ಹಾಲು ಕುಡಿದ ಮಗು ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಇನ್ನು ಮಗುವಿಗೆ ಹಾಲು ಡೈಜೆಸ್ಟ್‌ ಆಗಿಲ್ಲವೆಂದು ಬಾಯಿ ಒರೆಸಿ ಸಮಾಧಾನ ಮಾಡಲು ಮುಂದಾಗಿದ್ದಾಳೆ. ಆದರೆ, ಮಗು ಒಂದೇ ಸಮನೇ ಅಳುತ್ತಿತ್ತು. ಹಾಲುಣಿಸಿ 3 ಗಂಟೆಯ ನಂತರ ಮಗುವಿನ ಬಾಯಲ್ಲಿ ನೊರೆ ಬರಲು ಆರಂಭವಾಗಿದೆ. ಅದಾಗಲೇ ಮಗುವಿನ ಇಡೀ ದೇಹಕ್ಕೆ ವಿಷ ಆವರಿಸಿತ್ತು. ನಂತರ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಂಗೀತಾ ಸಾವನ್ನಪ್ಪಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ತಗುಲಿ ತಂದೆ, ಮಗ ಸಾವು