Publish Date: Mon, 24 Sep 2018 (14:38 IST)
Updated Date: Mon, 24 Sep 2018 (14:41 IST)
ಕಾರವಾರ : ಮಂತ್ರಿ ಸ್ಥಾನಕ್ಕಾಗಿ ರಾಜಕೀಯ ನಾಯಕರು ಕಿತ್ತಾಡುತ್ತಾರೆ. ಆದರೆ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ ದೇಶಪಾಂಡೆ ಅವರು ಮಾತ್ರ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ ಅವರು ಸಚಿವರಾಗುವುದಾದರೆ ಆಗಲಿ, ಅವರು ಇನ್ನೂ ಯಂಗ್ ಇದ್ದಾರೆ. ನಾನು ಯಾವಾಗಲೂ ಮಂತ್ರಿ ಸ್ಥಾನ ಬಿಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇದುವರೆಗೂ ಯಾರಿಗೂ ಸಚಿವರನಾಗಿ ಮಾಡಿ ಎಂದು ಹೇಳಿಲ್ಲ. ಯಾವುದನ್ನು ಕೂಡ ಗಟ್ಟಿ ಹಿಡಿದುಕೊಂಡಿಲ್ಲ. ಆದರೆ ಶಿವರಾಮ್ ಹೆಬ್ಬಾರ ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸಲಿ ಎಂದು ಸಲಹೆ ನೀಡಿದರು.
ಸಮ್ಮಿಶ್ರ ಸರ್ಕಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶಾಸಕರುಗಳು ಪಕ್ಷಾಂತರ ಮಾಡುತ್ತಿದ್ದಾರೆ ಎನ್ನುವುದು ಮಾಧ್ಯಮಗಳಲ್ಲಿ ಸೃಷ್ಟಿಸಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.